ತೋಕೂರು : “ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ ದೇಶದ ವೀರ ಯೋಧರ ಮತ್ತು ಕಾರ್ಗಿಲ್ ವಿಜಯೋತ್ಸವದ ನೆನಪಿಗಾಗಿ ಯುವಕರೆಲ್ಲರೂ ಸೇರಿ ಶ್ರಮದಾನ ಮಾಡುತ್ತಿರುವುದು ಉತ್ತಮ ಕೆಲಸ” ಎಂದು ನಿವೃತ್ತ ಯೋಧರಾಗಿರುವ ವಿಜಯ ಕುಮಾರ್ ಹೇಳಿದರು.
ಕಾರ್ಗಿಲ್ ವಿಜಯೋತ್ಸವದ ದಿನದ ಅಂಗವಾಗಿ, ತೋಕೂರು ಸ್ಪೋರ್ಟ್ಸ್ ಕ್ಲಬ್ ನಿಂದ ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ನೂತನ ಅಶ್ವಥ ಕಟ್ಟೆಯ ಬಳಿ ಶ್ರಮದಾನ ನಡೆಯಿತು. ಸುತ್ತಮುತ್ತಲಿನ ಗಿಡ-ಗಂಟಿಗಳನ್ನು ಕಡಿದು,ಭಕ್ತರಿಗೆ ಅನುಕೂಲವಾಗುವಂತೆ ಅಶ್ವಥ ಕಟ್ಟೆಯ ಸುತ್ತಲೂ ಜಲ್ಲಿಯ ಹುಡಿಯನ್ನು ಹಾಕಿ ಅದರ ಮೇಲೆ ಹಾಸು ಕಲ್ಲುಗಳನ್ನು ಹಾಸಿ ಶ್ರಮದಾನದ ಮೂಲಕ ಅನುವು ಮಾಡಿಕೊಡಲಾಯಿತು. ಈ ಶ್ರಮದಾನ ಕಾರ್ಯವು ಬೆಳಿಗ್ಗೆ ಘಂಟೆ 7.00 ರಿಂದ 9.00 ರ ತನಕ ನಡೆಯಿತು.
- ಮಾರ್ಗದರ್ಶನ
- ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು
- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ ಕ ಜಿಲ್ಲೆ
- ಗ್ರಾಮ ಪಂಚಾಯತ್ ಪಡುಪಣಂಬೂರು
- ಜಿಲ್ಲಾ ಯುವಜನ ಒಕ್ಕೂಟ, ದ. ಕ ಜಿಲ್ಲೆ
- ಸಹಕಾರ :
- ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ,ತೋಕೂರು
- ನೇತೃತ್ವ :
- ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ), ತೋಕೂರು, ಹಳೆಯಂಗಡಿ
ಈ ಸಂದರ್ಭ ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಮೋಹನ್ ದಾಸ್, ಪರಿಸರ ನೈರ್ಮಲ್ಯದ ಕಾರ್ಯದರ್ಶಿ ಸಂತೋಷ್ ಕುಮಾರ್, ಸಂಸ್ಥೆಯ ಗೌರವಾಧ್ಯಕ್ಷರು ನಾರಾಯಣ ಜಿ ಕೆ, ಅಧ್ಯಕ್ಷರು ಸಂತೋಷ್ ದೇವಾಡಿಗ,ಉಪಾಧ್ಯಕ್ಷರು ದೀಪಕ್ ಸುವರ್ಣ, ಹಳೆಯಂಗಡಿ ಪಿ.ಸಿ.ಎ ಬ್ಯಾಂಕ್ ನಿರ್ದೇಶಕರು, ಮುಖೇಶ್ ಸುವರ್ಣ, ಮಹಿಳಾ ಕಾರ್ಯಧ್ಯಕ್ಷೆ ವಾಣಿ ಮಹೇಶ್, ಜೊತೆ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಭಾಸ್ಕರ್ ಟಿ ಸಾಲ್ಯಾನ್ ಮತ್ತು ಜಂಟಿ ಸಂಸ್ಥೆಗಳ ಸದಸ್ಯರೆಲ್ಲರೂ ಭಾಗವಹಿಸಿ ಶ್ರಮದಾನವನ್ನು ಯಶಸ್ಸಿಗೆ ಕಾರಣರಾದರು.