ತೋಕೂರು: ‘ಗದ್ದೆಗಿಳಿಯೋಣ’ ಹಡಿಲು ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ

0
398
Tap to know MORE!

ಪಡುಪಣಂಬೂರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಜಗದೀಶ್ ರಾವ್, ಸರ್ವೇಶ್ ರಾವ್ ಹಾಗೂ ತೋಕೂರು ಮಾಗಂದಡಿ ರತನ್ ಶೆಟ್ಟಿ ಮನೆತನದ ಗದ್ದೆಯಲ್ಲಿ ತೋಕೂರು ಕಿರಣ್ ದೇವಾಡಿಗ ಅವರ ನೇತೃತ್ವದಲ್ಲಿ ಜಿಲ್ಲಾ, ರಾಜ್ಯ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು, ಹಳೆಯಂಗಡಿ, ಇದರ ಸದಸ್ಯರು ಹಾಗೂ ಸದಸ್ಯೆಯರಿಂದ ನೇಜಿ ನೆಡುವ ಕಾರ್ಯಕ್ರಮ ನಡೆಸಲಾಯಿತು.

ದ.ಕ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರು ವಿನೋದ್ ಕುಮಾರ್ ಬೊಳ್ಳೂರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಹಡಿಲು ಭೂಮಿಯನ್ನು ಗುರುತಿಸಿ ಭತ್ತ ನಾಟಿಗೆ ಕ್ರಮ ಕೈ ಗೊಂಡಿದ್ದು ಕೃಷಿ ಕಾರ್ಯ ಪ್ರಗತಿಯಲ್ಲಿದೆ. ಇದರ ಜೊತೆಗೆ ಕೃಷಿ ಕಾರ್ಯಕ್ಕೆ ಎಲ್ಲೆಡೆ ಉತ್ತೇಜನ ಸಿಗುವಂತೆ ಪ್ರೋತ್ಸಾಹವನ್ನು ಸರಕಾರವೂ ನೀಡುತ್ತಿದೆ ಎಂದು ಹೇಳಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ತೋಕೂರು: ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡುವ ಕಾರ್ಯಕ್ರಮ

ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಸದಸ್ಯರು ಮೋಹನ್ ದಾಸ್, ಸಂತೋಷ್ ಕುಮಾರ್, ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಸಂತೋಷ್ ದೇವಾಡಿಗ, ಉಪಾಧ್ಯಕ್ಷ ದೀಪಕ್ ಸುವರ್ಣ, ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಲಾಲ್, ಕೋಶಾಧಿಕಾರಿ ಸಂಪತ್ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ವಾಣಿ ಮಹೇಶ್, ಸಂಸ್ಥೆಯ ಕ್ರಿಕೆಟ್ ತಂಡದ ನಾಯಕ ಗೌತಮ್ ಬೆಲ್ಚೆಡ್, ಸದಸ್ಯರಾದ ,ರತನ್ ಶೆಟ್ಟಿ,ಜಗದೀಶ್ ಕೋಟ್ಯಾನ್,ಗಣೇಶ್ ಆಚಾರ್ಯ,ಪದ್ಮನಾಭ ಶೆಟ್ಟಿ, ವಿಪಿನ್ ಶೆಟ್ಟಿ,ಮಹೇಶ್ ಸುವರ್ಣ,ರಮೇಶ್ ಕರ್ಕೇರ, ಸದಸ್ಯೆಯರಾದ, ಪ್ರಮೀಳಾ ಕೆ., ನೀಮಾ, ಶೋಭಾ ಅಂಚನ್, ಸುಜಾತಾ ಜಿ. ಕೆ,ಉಷಾ ಶೆಟ್ಟಿ, ವಿಜೇತಾ ಎಮ್, ಸರಿತಾ, ಕವಿತಾ ನಾಗೇಶ್, ಗಾಯತ್ರಿ, ಶ್ರೇಯಸ್, ಕಿರಣ್ ದೇವಾಡಿಗ,ಭವಾನಿ ದೇವಾಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here