ತೋಕೂರು: ಪರಿಸರ ದಿನಾಚರಣೆಯಂದು ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ

0
295
Tap to know MORE!

ತೋಕೂರು: ಜಿಲ್ಲಾ, ರಾಜ್ಯ,ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ
ಜನ ಸಾಮಾನ್ಯರಲ್ಲಿ ಪರಿಸರ ಕಾಳಜಿ ಮತ್ತು ಮಹತ್ವವನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಉಸಿರಿಗಾಗಿ ಹಸಿರು ಪರಿಸರ ಜಾಗೃತಿ ಆನ್ ಲೈನ್ ಅಭಿಯಾನ ನಡೆಸಲಾಯಿತು.

ಈ ಅಭಿಯಾನದ ಅಂಗವಾಗಿ ಸ್ಪೋರ್ಟ್ಸ್ ಕ್ಲಬ್ ನ ಗೌರವ ಮಾರ್ಗದರ್ಶಕರು, ಸದಸ್ಯರು, ಸದಸ್ಯೆಯರು ಮತ್ತು ಮಕ್ಕಳು ತಮ್ಮ ತಮ್ಮ ಮನೆಯಲ್ಲಿ ಒಂದು ಸಸಿ ನೆಟ್ಟು ಅದರೊಂದಿಗಿನ ಭಾವಚಿತ್ರವನ್ನು ಕಳುಹಿಸಿ ಕೊಡುವ ಮೂಲಕ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತ ಪಡಿಸಿದರು ಹಾಗೂ ನೆಟ್ಟ ಸಸಿಯನ್ನು ಮುಂದಿನ ದಿನಗಳಲ್ಲಿ ನೀರೆರೆದು ಪೋಷಿಸುವ ಹೊಣೆಗಾರಿಕೆಯನ್ನು ಅನುಸರಿಸುವ ಪಣ ತೊಟ್ಟಿರುತ್ತಾರೆ.

ತೋಕೂರು ಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ ಸ್ವಚ್ಛತಾ ಜಾಗೃತಿ ಆಂದೋಲನ ಮತ್ತು ಶ್ರಮದಾನ

ಅಂತೆಯೇ, ವಿಶ್ವ ಪರಿಸರ ದಿನಾಚರಣೆಯನ್ನು ಸಾಂಕೇತಿಕವಾಗಿ ಮತ್ತು ಸರಳವಾಗಿ ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ಥಾನಿ ಶಾಲೆಯ ತೋಟದಲ್ಲಿ ಗಿಡ ನೆಡುವುದರ ಮೂಲಕ ಹಮ್ಮಿಕೊಳ್ಳಲಾಗಿದ್ದ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಮಾಜಿ ಅದ್ಯಕ್ಷರು ಹಾಗೂ ಹಾಲಿ ಸದಸ್ಯರು ಶ್ರೀ ಮೋಹನ್ ದಾಸ್ ಅವರು ಪರಿಸರ ರಕ್ಷಿಸುವ ಜಾವಾಬ್ದಾರಿ ಮಾನವರದ್ದಾಗಿದೆ,ಆದರೆ ಬಹು ಪಾಲು ಜನರು ಇದನ್ನು ಸರಿಯಾಗಿ ನಿಭಾಯಿಸುವುದಿಲ್ಲ.ಪರಿಸರವು ಕೇವಲ ಪರಿಸರ ದಿನಾಚರಣೆಗೆ ಮಾತ್ರವೇ ಸೀಮಿತವಾಗಿದೆ,ಜತೆಗೆ ಕೆಲವು ಭಾಷಣಗಳಿಗೆ ಮಾತ್ರ ಸಾಕ್ಷಿಯಾಗಿದೆ. ಈ ದಿನಕ್ಕಿರುವ ಮಹತ್ವವನ್ನು ಪ್ರತಿಯೊಬ್ಬ ನಾಗರಿಕನು ತಿಳಿಯಬೇಕಾಗಿದೆ ಎಂದು ಹೇಳಿದರು.

ಸಂಸ್ಥೆಯ ಗೌರವ ಮಾರ್ಗದರ್ಶಕರು ಶ್ರೀ ರಮೇಶ್ ಅಮೀನ್ ಅವರು ವಾರದಲ್ಲಿ ಒಂದು ಬಾರಿಯಾದರೂ ಪರಿಸರದ ಬಗ್ಗೆ ಮಾಹಿತಿ ಗಮನ ಹರಿಸಿದರೆ ಮೂಲಕ ಚಿಕ್ಕ ವಯಸ್ಸಿನಿಂದಲೇ ಪರಿಸರದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಲು ಸಹಕಾರಿಯಾಗಬಹುದು ಎಂದು ಹೇಳಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಸದಸ್ಯರು ಮತ್ತು ಸಂಸ್ಥೆಯ ಪರಿಸರ ಸಂರಕ್ಷಣಾ ಕಾರ್ಯದರ್ಶಿ ಸಂತೋಷ್ ಕುಮಾರ್, ಗಜಾನನ ಸ್ಪೋರ್ಟ್ ಕ್ಲಬ್ ನ ಅಧ್ಯಕ್ಷರಾದ ನವೀನ್ ಶೆಟ್ಟಿಗಾರ್, ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಲಾಲ್, ಸದಸ್ಯರಾದ ಶಂಕರ್ ಪೂಜಾರಿ, ಚಂದ್ರಶೇಖರ್ ದೇವಾಡಿಗ, ಅರ್ಫಾಜ್, ರಮೇಶ್ ಕರ್ಕೇರ, ಸೋಮನಾಥ್ ಪೂಜಾರಿ, ಚಂದ್ರ ಸುವರ್ಣ, ಹಾಗೂ ಮಹಿಳಾ ಸದಸ್ಯೆ ಶ್ರೀಮತಿ ಶೈಲ.ಎನ್. ಶೆಟ್ಟಿಗಾರ್ ಪಾಲ್ಗೊಂಡರು.

ಸಂಸ್ಥೆಯ ಅಧ್ಯಕ್ಷರು ಸಂತೋಷ್ ದೇವಾಡಿಗ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಲಾಲ್ ವಂದಿಸಿದರು. ಪರಿಸರ ಸಂರಕ್ಷಣಾ ಕಾರ್ಯದರ್ಶಿ ಸಂತೋಷ್ ಕುಮಾರ್ ನಿರೂಪಿಸಿದರು.

LEAVE A REPLY

Please enter your comment!
Please enter your name here