ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ ಕ್ಲಬ್‌ಗೆ ವಿಶೇಷ ತುಳು ಯುವ ಸಂಘಟನ ಪುರಸ್ಕಾರ

0
35

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ವಾರ್ಷಿಕ ಗೌರವ ಪ್ರಶಸ್ತಿ ಪ್ರಧಾನ ಪುಸ್ತಕ ಬಹುಮಾನ ವಿತರಣೆ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಮಾ. 7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಭಾಗೃಹದಲ್ಲಿ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ರಾಜ್ಯ ಸಚಿವರಾದ ಅರವಿಂದ ಲಿಂಬಾವಳಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2020 ನೇ ಸಾಲಿನ ವಿಶೇಷ ತುಳು ಯುವ ಸಂಘಟನ ಪುರಸ್ಕಾರವನ್ನು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್®️ ತೋಕೂರು, ಹಳೆಯಂಗಡಿ ಸಂಸ್ಥೆಗೆ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: ತೋಕೂರಿನಲ್ಲಿ ಮಾನಸಿಕ ಆರೋಗ್ಯ ಮಾಹಿತಿ ಕಾರ್ಯಾಗಾರ

ಕರ್ನಾಟಕ ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಉಡುಪಿ ಶ್ರಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ,
ಕಂದಾಯ ಸಚಿವರು ಆರ್. ಅಶೋಕ್, ಚಿಕ್ಕ ಪೇಟೆಯ ವಿಧಾನ ಸಭಾ ಕ್ಷೇತ್ರದ ಶಾಸಕರು ಗರುಡಾಚಾರ್, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರು ಡಾ! ಪ್ರಭಾಕರ್ ಭಟ್ ಕಲ್ಲಡ್ಕ, ಕರಾವಳಿ ಪ್ರಾಧಿಕಾರದ ಅದ್ಯಕ್ಷರು ಮಟ್ಟಾರು ರತ್ನಾಕರ್ ಹೆಗ್ಡೆ, ಧರ್ಮಸ್ಥಳ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ರಾಜ್ಯ ಸಭಾ ಸದಸ್ಯ ಕೆ. ನಾರಾಯಣ, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಖ್ಯಾತ ಸಂಗೀತ ನಿರ್ದೇಶಕರು ಗುರು ಕಿರಣ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರು ಸೋಮಶೇಖರ್, ಬ್ಯಾರಿ ಸಾಹಿತ್ಯಅಕಾಡೆಮಿಯ ಅದ್ಯಕ್ಷರು ರಹೀಂ ಉಚ್ಚಿಲ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅದ್ಯಕ್ಷರು ಡಾ! ಜಗದೀಶ್ ಪೈ, ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ, ಬೆಂಗಳೂರಿನ ಸರ್ವ ತುಳು ಸಂಘಟನೆಗಳ ವಿಶೇಷ ಸಹಕಾರದೊಂದಿಗೆ ನಡೆಸಲ್ಪಟ್ಟ ಕಾಯಕ್ರಮದಲ್ಲಿ, ರಿಜಿಸ್ಟರ್ ರಾಜೇಶ್. ಜಿ, ಸದಸ್ಯರಾದ ನರೇಂದ್ರ ಕೆರೆಕಾಡು, ನಾಗೇಶ್ ಕುಲಾಲ್, ಬೆಂಗಳೂರಿನ ಸದಸ್ಯೆ ಸಂಚಾಲಕಿ ಕಾಂತಿ ಶೆಟ್ಟಿ, ಹಾಗೂ ಇನ್ನಿತರ ಸದಸ್ಯರು ಸಂಗೀತ ಚರ್ಚಾಕೂಟ, ವಿಚಾರಗೋಷ್ಠಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವಿಶೇಷ ಪ್ರಶಸ್ತಿ ಮುಡಿಗೇರಿಸಿಕೊಂಡ ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್®️ ಇದರ ಗೌರವ ಅಧ್ಯಕ್ಷರಾದ ನಾರಾಯಣ್ ಜಿ. ಕೆ, ಅಧ್ಯಕ್ಷರಾದ ಸಂತೋಷ್ ದೇವಾಡಿಗ, ಉಪಾಧ್ಯಕ್ಷ ದೀಪಕ್ ಸುವರ್ಣ, ಪ್ರದಾನ ಕಾರ್ಯದರ್ಶಿ ಜಗದೀಶ್ ಕುಲಾಲ್, ಕಾರ್ಯದ್ಯಕ್ಷ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯದ್ಯಕ್ಷೆ ವಾಣಿ ಮಹೇಶ್, ಮಹಿಳಾ ಕಾರ್ಯದರ್ಶಿ ಜ್ಯೋತಿ ಕುಲಾಲ್, ಸಂಸ್ಥೆಯ ಗೌರವ ಮಾರ್ಗದರ್ಶಕರಾದ ಹರಿಪ್ರಸಾದ್. ಜಿ. ಶೆಟ್ಟಿ, ಬೆಂಗಳೂರು, ರಮೇಶ್ ಅಮೀನ್ ಮುಂಬೈ,ಪದಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಬೇಕಲ್, ಸಂತೋಷ್ ಕುಮಾರ್, ಸುನಿಲ್. ಜಿ. ದೇವಾಡಿಗ, ಗೌತಮ್ ಬೆಲ್ಚೆಡ್, ಪ್ರಮೀಳಾ. ಕೆ. ದೇವಾಡಿಗ, ಸದಸ್ಯರಾದ ಗಣೇಶ್ ಕುಮಾರ್ ಬೆಂಗಳೂರು, ಕೇಶವ ದೇವಾಡಿಗ, ಸಂತೋಷ್ ದೇವಾಡಿಗ ಬೆಂಗಳೂರು, ಪದ್ಮನಾಭ ಶೆಟ್ಟಿ, ಜಯಂತ್ ಕುಂದರ್ ಸಂಕಲಕರಿಯ, ದರ್ಮನಂದ ಶೆಟ್ಟಿಗಾರ್, ವಿಪಿನ್ ಶೆಟ್ಟಿ ಬೆಂಗಳೂರು, ರಮೇಶ್ ಕರ್ಕೇರ, ಸಂತೋಷ್ ದೇವಾಡಿಗ, ಅರ್ಫಾಜ್, ಕಿರಣ್ ಬೆಲ್ಛೆಡ್ ಬೆಂಗಳೂರು, ಕಾರ್ತಿಕ್ ಶೆಟ್ಟಿ ಬೆಂಗಳೂರು, ಕಲ್ಪೇಶ್, ಮಹಿಳಾ ಸದಸ್ಯೆಯರಾದ ಶೋಭಾ. ವಿ. ಅಂಚನ್, ವೀಣಾ ಪ್ರಶಾಂತ್ ಕುಮಾರ್ ಬೇಕಲ್, ನೀಮಾ. ಐ. ಕೆ, ಯಶೋದ .ಜೆ. ದೇವಾಡಿಗ, ಸಂಧ್ಯಾ ಗಣೇಶ್ ಬೆಂಗಳೂರು, ಹಾಗೂ ಮಾಸ್ಟರ್ ಭವಿಷ್, ಬೇಬಿ ತ್ರಿಷಾ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here