ಜಿಲ್ಲಾ, ರಾಜ್ಯ ಮತ್ತು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಇದರ ಆಶ್ರಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಪ್ರಯುಕ್ತ ರವಿವಾರ,ಸ್ವಚ್ಛತಾ ಜಾಗೃತಿ ಆಂದೋಲನ ಮತ್ತು ಶ್ರಮದಾನ ನಡೆಯಿತು.
ಸಂಸ್ಥೆಯ ಸದಸ್ಯರು 10 ನೇ ತೋಕೂರು ಗ್ರಾಮದ ಎಸ್ಕೊಡಿ ಬಳಿಯ ಪಾನಿಲಚ್ಚಿಲ್ ಪರಿಸರದ ಶ್ರೀಮತಿ ಯಶೋದ ಅವರ ಶೋಚನೀಯ ಹಾಗೂ ಶಿಥಿಲಾವಸ್ಥೆಯಲ್ಲಿದ್ದ ಮನೆಯ ಮೇಲ್ಛಾವಣಿಯಲ್ಲಿನ ಶೀಟ್ ಗಳನ್ನು ತೆಗೆದು, ಮನೆಯ ಸುತ್ತ ಮುತ್ತ ಇದ್ದ ಕಸ-ಕಡ್ಡಿ, ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸಿ ಮನೆಯ ಆವರಣವನ್ನು ಶುಚಿ ಮಾಡುವ ಮೂಲಕ ವಿಶೇಷವಾಗಿ ಶ್ರಮದಾನ ಮಾಡಲಾಯಿತು.
ಈ ವಿಶೇಷ ಶ್ರಮದಾನದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಸದಸ್ಯರು ಶ್ರೀ ಸಂತೋಷ್ ಕುಮಾರ್ ,ಸಂಸ್ಥೆಯ ಗೌರವ ಅದ್ಯಕ್ಷರು ಶ್ರೀ ನಾರಾಯಣ್. ಜಿ. ಕೆ, ಅದ್ಯಕ್ಷರು ಶ್ರೀ ಸಂತೋಷ್ ದೇವಾಡಿಗ, ಕಾರ್ಯಕಾರಿ ಸಮಿತಿಯ ಕಾರ್ಯಧ್ಯಕ್ಷರು ಶ್ರೀ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ ಕುಲಾಲ್, ಕೋಶಧಿಕಾರಿ ಶ್ರೀ ಸಂಪತ್ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕುಮಾರ್ ಬೇಕಲ್, ಪರಿಸರ ಸಂರಕ್ಷಣಾ ಕಾರ್ಯದರ್ಶಿ ಶ್ರೀ ಸುನಿಲ್ ದೇವಾಡಿಗ, ಕ್ರಿಕೆಟ್ ತಂಡದ ನಾಯಕ ಶ್ರೀ ಗೌತಮ್ ಬೆಲ್ಚಡ್, ಸದಸ್ಯರಾದ ಶ್ರೀ ಜಯಂತ್ ಕುಂದರ್ ಸಂಕಲಕರಿಯ, ಶ್ರೀ ಚಂದ್ರಶೇಖರ್ ದೇವಾಡಿಗ, ಶ್ರೀ ಪ್ರಸಾದ್ ಆಚಾರ್ಯ, ಶ್ರೀ ಬಾಲಕೃಷ್ಣ ಲೈಟ್ ಹೌಸ್, ಹಾಗೂ ಸಂತೋಷ್ ದೇವಾಡಿಗ ಇಂದಿನ ಶ್ರಮದಾನದಲ್ಲಿ ಭಾಗವಹಿಸಿದರು.