ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ಇದರ ಆಶ್ರಯದಲ್ಲಿ, ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ತೋಕೂರು – ಲೈಟ್ ಹೌಸ್ ರಸ್ತೆಯ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದಿಂದ ಮೋಹನ್ ಭಂಡಾರಿ ಮನೆಯವರೆಗೆ ಸ್ವಚ್ಛತಾ ಕಾರ್ಯ ಜರುಗಿತು.
ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಹೋಗಿ ಬರಲು ಕಷ್ಟಸಾಧ್ಯ ಎಂಬಂತಿದ್ದ ರಸ್ತೆ ಬದಿಯ ಎರಡು ಇಕ್ಕೆಲಗಳಲ್ಲಿ ಬೆಳೆದು ನಿಂತಿದ್ದ ಹುಲ್ಲುಗಳನ್ನು,ಗಿಡ-ಗಂಟಿಗಳನ್ನು ಸ್ವಚ್ಛ ಮಾಡಿ ಮರದ ಗೆಲ್ಲುಗಳನ್ನು ಕಡಿದು ಪ್ಲಾಸ್ಟಿಕ್ ಗಳನ್ನು ಹೆಕ್ಕಿ ರಸ್ತೆಯಲ್ಲಿ ಸಂಚರಿಸುವವರಿಗೆ ಅನುವು ಮಾಡಿ ಕೊಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿನೋದ್ ಕುಮಾರ್ ಬೊಳ್ಳೂರು, ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮೋಹನ್ ದಾಸ್, ಪಂಚಾಯತ್ ಮಾಜಿ ಸದಸ್ಯರಾದ ದಿನೇಶ್ ಕುಲಾಲ್, ಸಂಸ್ಥೆಯ ಪರಿಸರ ನೈರ್ಮಲ್ಯ ಕಾರ್ಯದರ್ಶಿಗಳುಳಾದ ಸಂತೋಷ್ ಕುಮಾರ್,ಜೊತೆ ಕಾರ್ಯದರ್ಶಿ ಸುನಿಲ್ ಜಿ ದೇವಾಡಿಗ, ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ದೇವಾಡಿಗ ಉಪಾಧ್ಯಕ್ಷರಾದ ದೀಪಕ್ ಸುವರ್ಣ ಮತ್ತಿತರರು ಈ ಅಭಿಯಾನದ ಯಶಸ್ವಿಗೆ ಸಹಕರಿಸಿದರು.