ತೋಕೂರು : ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ, 2019 ಜೂನ್ ತಿಂಗಳಿನಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ, ಬೆಳ್ಳಯರು ಕೆರೆಕಾಡಿನ ಕಿಟ್ಟಿ ಮಡಿವಾಳ್ತಿ ಹಾಗೂ ಮಗಳು ಗಿರಿಜಾ ಮಡಿವಾಳ್ತಿ ವಾಸವಾಗಿದ್ದ ಮನೆಯೂ ಶಿಥಿಲವಸ್ಥೆಯಲ್ಲಿರುವುದನ್ನು ಕಂಡು ಕ್ಲಬ್ನ ಸದಸ್ಯರು ಸುಮಾರು 12 ಗಂಟೆಗಳ ಕಾಲ ಅವಿರತ ಶ್ರಮ ವಹಿಸಿ, ರೂಪಾಯಿ 70 ಸಾವಿರ ವೆಚ್ಚದಲ್ಲಿ ದುರಸ್ಥಿ ಮಾಡಿ, ವರ್ಷಕ್ಕೆ 2 ಬಾರಿ ಸ್ವಚ್ಛತೆಯನ್ನು ನಿರ್ವಹಿಸುತ್ತಿದೆ. ಹಾಗೂ ಆಹಾರದ ಕಿಟ್ ಗಳನ್ನು ನೀಡುತ್ತಿದೆ.
ಹಾಗೆಯೇ, ಕ್ಲಬ್ನ ವಿಶೇಷ ಮನವಿಯ ಮೇರೆಗೆ, ತಾ 13-9-2020, ಭಾನುವಾರ, ಮೂಲ್ಕಿ ಲಯನ್ಸ್ ಕ್ಲಬ್ನ ಮೂಲಕ ಉಚಿತ ಅಡುಗೆ ಅನಿಲ ಸಂಪರ್ಕ ಹಾಗೂ ಅಡುಗೆಯ ಉಪಕರಣದ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಹಾಗೇನೇ ತಾ, 21-9-2020, ಸೋಮವಾರ ಕ್ಲಬ್ನ ವತಿಯಿಂದ ಕಿಟ್ಟಿ ಮಡಿವಾಳ್ತಿ, ಹಾಗೂ ಗಿರಿಜಾ ಮಡಿವಾಳ್ತಿ ಅವರ ಮನೆಯ ಅಡುಗೆ ಕೋಣೆಯನ್ನು ದುರಸ್ಥಿ ಮಾಡಲಾಯಿತು.
ಇದನ್ನೂ ನೋಡಿ : ತೋಕೂರಿನಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳ ಕುರಿತು ಮಾಹಿತಿ ಕಾರ್ಯಾಗಾರ
ಈ ಸಂದರ್ಭದಲ್ಲಿ ಕ್ಲಬ್ ನ ಗೌರವ ಅಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು ಉಪಸ್ಥಿತರಿದ್ದರು.