ತೋಕೂರು: ಸ್ವಚ್ಛತಾ ಅಭಿಯಾನ ಮತ್ತು ಪ್ಲಾಸ್ಟಿಕ್ ಬಳಕೆಯ ಜಾಗೃತಿ

0
178
Tap to know MORE!

ತೋಕೂರು: ಸ್ವಚ್ಛತೆ ನಮ್ಮೆಲ್ಲರ ಮೊದಲ ಆದ್ಯತೆಯಾಗಲಿ ಗ್ರಾಮದ ಸುತ್ತ ಮುತ್ತ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಇದರಿಂದ ಆರೋಗ್ಯಕ್ಕೂ ಸಹ ಒಳ್ಳೆಯದು. ಪರಸ್ಪರ ಸ್ನೇಹ ಬಾಂಧವ್ಯವೂ ಹೆಚ್ಚುತ್ತದೆ ಎಂದು ಸಂಸ್ಥೆಯ ಹಿರಿಯ ಸದಸ್ಯರು ಶ್ರೀ ಚಂದ್ರಶೇಖರ್ ದೇವಾಡಿಗ ಹೇಳಿದರು.

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಹಳೆಯಂಗಡಿ, ಇದರ ಆಶ್ರಯದಲ್ಲಿ ಸೆಪ್ಟೆಂಬರ್ 27ರ ರವಿವಾರ ತೋಕೂರು-ಲೈಟ್ ಹೌಸ್ ರಸ್ತೆಯ ಎರಡು ಬದಿಯಲ್ಲಿನ ಗೆಲ್ಲುಗಳನ್ನು ಕಡಿದು, ತ್ಯಾಜ್ಜ ಸಂಗ್ರಹ ಹಾಗೂ ಪ್ಲಾಸ್ಟಿಕ್ ಬಳಕೆಯ ಜಾಗೃತಿ ಮೂಡಿಸಲಾಯಿತು.

ಇದನ್ನೂ ನೋಡಿ: ತೋಕೂರು ಸ್ಪೋರ್ಟ್ಸ್ ಕ್ಲಬ್ ಸಹಕಾರದೊಂದಿಗೆ ನೆರವಿನ ಆಸರೆ

ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಮಾಜಿ ಅಧ್ಯಕ್ಷರು ಶ್ರೀ ಮೋಹನ್ ದಾಸ್, ಕ್ಲಬ್‌ನ ಗೌರವ ಅಧ್ಯಕ್ಷರು ಶ್ರೀ ನಾರಾಯಣ ಜಿ. ಕೆ, ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ, ಕಾರ್ಯಾಧ್ಯಕ್ಷರು ಶ್ರೀ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್, ಪ್ರದಾನ ಕಾರ್ಯದರ್ಶಿ ಶ್ರೀ ಜಗಧೀಶ್ ಕುಲಾಲ್, ಕೋಶಾಧಿಕಾರಿ ಶ್ರೀ ಸಂಪತ್ ದೇವಾಡಿಗ, ಇನ್ನಿತರ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here