ತ್ಯಾಜ್ಯ ನೀರಲ್ಲೂ ಕೊರೊನಾ..!!

0
220
Tap to know MORE!

ಮೊದಲ ಬಾರಿಗೆ ಭಾರತೀಯ ವಿಜ್ಞಾನಿಗಳು ತ್ಯಾಜ್ಯ ನೀರಿನಲ್ಲೂ ಕೊರೊನಾ ವೈರಾಣುಗಳ ವಂಶವಾಹಿಯನ್ನು ಪತ್ತೆಹಚ್ಚಿದ್ದಾರೆ. ತ್ಯಾಜ್ಯನೀರು ಆಧಾರಿತ ಸಾಂಕ್ರಾಮಿಕ ರೋಗಶಾಸ್ತ್ರದ ಮೂಲಕ ಕೊರೊನಾ ಸೋಂಕು ಕುರಿತು ಅಧ್ಯಯನ ನಡೆಸಲು ಈ ಸಂಶೋಧನೆ ನೆರವಾಗಲಿದೆ
ಗುಜರಾತ್ ನಲ್ಲಿರುವ ಐಐಟಿ ಗಾಂಧಿನಗರದ ವಿಜ್ಞಾನಿಗಳ ತಂಡದ ಈ ಸಾಧನೆಗೆ ಜಾಗತಿಕವಾಗಿ ಪ್ರಶಂಸೆ ದೊರೆತಿದೆ.

ವಿಜ್ಞಾನಿಗಳ ತಂಡವು ಅಹಮದಾಬಾದ್ ನ ತ್ಯಾಜ್ಯ ನೀರಿನಲ್ಲಿ ಕೊರೊನಾ ವೈರಸ್ ನ ಆರ್ ಎನ್ ಎ ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಪತ್ತೆ ಹಚ್ಚಿದೆ. ಈ ಮೂಲಕ ಕೊರೊನಾ ಸೋಂಕಿಗೆ ಸಂಬಂಧಿಸಿ ತ್ಯಾಜ್ಯ ನೀರು ಆಧಾರಿತ ಸಾಂಕ್ರಾಮಿಕ ರೋಗಶಾಸ್ತ್ರದ ಅಧ್ಯಯನ ನಡೆಸುತ್ತಿರುವ ಕೆಲವೇ ರಾಷ್ಟಗಳಲ್ಲಿ ಭಾರತವೂ ಸೇರಿದೆ.

LEAVE A REPLY

Please enter your comment!
Please enter your name here