ಥಾಣೆ, ಮುಂಬೈಯಲ್ಲಿ ಪೆಟ್ರೋಲ್ ಶತಕ! ಬೆಲೆ ನೂರರ ಗಡಿ ದಾಟಿದ ಮೂರನೇ ರಾಜ್ಯ ಮಹಾರಾಷ್ಟ್ರ!

0
166
Tap to know MORE!

ಮುಂಬೈ: ಕಳೆದ ಕೆಲವು ದಿನಗಳಿಂದ ಪೈಸೆಗಳ ರೂಪದಲ್ಲಿ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ದರ ಮುಂಬೈನಲ್ಲಿಂದು ಶತಕ ಬಾರಿಸಿದೆ. ಇಂದು ಪೆಟ್ರೋಲ್ ಲೀಟರ್ ಗೆ 100.19 ರೂ. ಮತ್ತು ಡೀಸಲ್ ಗೆ 92.17 ರೂ. ಇದೆ.

ಥಾಣೆ ಮತ್ತು ನವೀ ಮುಂಬೈನಲ್ಲಿ ಇದಕ್ಕಿಂತಲೂ ದರ ಹೆಚ್ಚಾಗಿದೆ. ಈ ಎರಡು ನಗರಗಳಲ್ಲಿ ಪೆಟ್ರೋಲ್ ಲೀಟರ್ ಗೆ 100.32 ರೂ. ಮತ್ತು ಡೀಸಲ್ ಲೀಟರ್ ಗೆ 92.17 ರೂ. ದರವಿದೆ.

ಹೈಡ್ರೋಜನ್ ಬಲೂನ್ ಕಟ್ಟಿ ನಾಯಿಯನ್ನು ಹಾರಿಸಿದ ಯುಟ್ಯೂಬರ್‌ನ ಬಂಧನ

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 93.94 ರೂ. ಇದ್ದು, ಡೀಸಲ್ ಗೆ 91.87 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಕ್ರಮವಾಗಿ 95.51 ರೂ. ಮತ್ತು 89.65 ರೂ. ಇದ್ದರೆ, ಕೋಲ್ಕತ್ತಾದಲ್ಲಿ ಪೆಟ್ರೋಲ್ ಗೆ 93.97 ರೂಪಾಯಿಯಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮೇ.4ರಿಂದ ಸತತವಾಗಿ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ಶತಕ ದಾಟಿದೆ.

LEAVE A REPLY

Please enter your comment!
Please enter your name here