ಕ್ರಿಕೆಟ್ ದಕ್ಷಿಣ ಆಫ್ರಿಕಾ ಮೇಲೆ ಸರ್ಕಾರದ ಹಿಡಿತ – ಐಸಿಸಿಯಿಂದ ನಿಷೇಧದ ಭೀತಿ

0
209
Tap to know MORE!

ಕೇಪ್ ಟೌನ್: ಭ್ರಷ್ಟಾಚಾರದ ಆರೋಪದ ಮೇರೆಗೆ ದಕ್ಷಿಣ ಆಫ್ರಿಕಾ ಸರ್ಕಾರವು ಕ್ರಿಕೆಟ್‌ ದಕ್ಷಿಣ ಆಫ್ರಿಕಾ(ಸಿಎಸ್‌ಎ)ವನ್ನು ಅಮಾನತುಗೊಳಿಸಿದ್ದು, ರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾದ ಕ್ರೀಡಾ ಒಕ್ಕೂಟ ಮತ್ತು ಒಲಿಂಪಿಕ್ ಸಮಿತಿಯು (ಎಸ್‌ಎಎಸ್‌ಒಸಿ) ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಮಂಡಳಿಯನ್ನು ಒಂದು ತಿಂಗಳ ಅವಧಿಗೆ ಅಮಾನತುಗೊಳಿಸಿದೆ. ಈ ಅವಧಿಯಲ್ಲಿ ಎಸ್‌ಎಎಸ್‌ಒಸಿ ತನಿಖೆ ನಡೆಸಲಿದೆ.

ದೇಶದ ಕ್ರಿಕೆಟ್ ಆಡಳಿತ ಮಂಡಳಿಯು ಇತ್ತೀಚೆಗೆ ವರ್ಣಭೇದ ನೀತಿ, ಭ್ರಷ್ಟಾಚಾರ ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿದೆ. ಇದರಿಂದಾಗಿ ಕೆಲ ಪ್ರಮುಖ ಆಟಗಾರರು ಮೂಲೆಗುಂಪು ಆಗಿದ್ದಾರೆ ಎಂದು ಕೇಳಿ ಬರುತ್ತಿದೆ. ಈ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ.

ದಕ್ಷಿಣ ಆಫ್ರಿಕಾ ಕ್ರೀಡಾ ಕಾನ್ಫೆಡೆರೇಷನ್‌ ಹಾಗೂ ಒಲಿಂಪಿಕ್‌ ಸಮಿತಿಯು(ಎಸ್‌ಎಎಸ್‌ಸಿಒಸಿ) ಸಿಎಸ್‌ಎಗೆ ಬರೆದ ಪತ್ರದಲ್ಲಿ, ‘ಸಿಎಸ್‌ಎ ಮಂಡಳಿ ಮತ್ತು ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಆಡಳಿತದಿಂದ ಕೆಳಗೆ ಇಳಿಯಿರಿ’ ಎಂದು ಹೇಳಿದೆ. ಆ ಮೂಲಕ ಟಾಸ್ಕ್‌ ಟೀಮ್‌ನಿಂದ ಒಂದು ತಿಂಗಳ ತನಿಖೆಗೆ ಆದೇಶಿಸಿದೆ.

ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ ಮಂಡಳಿ ಆಡಳಿತಕ್ಕೆ ಸಂಬಂಧಿಸಿದಂತಹ ಬಿಕ್ಕಟ್ಟುಗಳನ್ನು ಎದುರಿಸುತ್ತಿತ್ತು. ಈ ಕಾರಣದಿಂದ ದಕ್ಷಿಣ ಆಫ್ರಿಕಾ ಸರ್ಕಾರ ಮಂಡಳಿಯನ್ನು ತನ್ನ ಹಿಡಿತಕ್ಕೆ ಪಡೆದಿದೆ.

ಕ್ರಿಕೆಟ್ ಮಂಡಳಿಗಳ ಮೇಲೆ ರಾಜಕೀಯ ಹಿಡಿತ ಹೊಂದಿರುವುದು ಐಸಿಸಿಯ ನಿಯಮಕ್ಕೆ ವಿರುದ್ಧವಾಗಿದೆ. ಈ ಕಾರಣದಿಂದಲೇ ಕಳೆದ ವರ್ಷ ಜಿಂಬಾಬ್ವೆ ತಂಡವನ್ನೂ ಅಮಾನತು ಮಾಡಲಾಗಿತ್ತು.

ICC ಸಂವಿಧಾನದ ವಿಧಿ 2.4 (C) ಮತ್ತು (D) ಪ್ರಕಾರ, ಕ್ರಿಕೆಟ್‌ನ ಆಡಳಿತ ಮತ್ತು / ಅಥವಾ ಆಡಳಿತದಲ್ಲಿ ಯಾವುದೇ ಸರ್ಕಾರದ ಹಸ್ತಕ್ಷೇಪಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಚುನಾವಣೆಗಳ ಒಂದು ಪ್ರಕ್ರಿಯೆಗೆ ಒಂದು ಬಾಧ್ಯತೆಯನ್ನು ವಿಧಿಸುತ್ತದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಈ ಬೆಳವಣಿಗೆಯ ಬಗ್ಗೆ ಐಸಿಸಿ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

LEAVE A REPLY

Please enter your comment!
Please enter your name here