ದಕ್ಷಿಣ ಕನ್ನಡಕ್ಕೆ ಮತ್ತೊಮ್ಮೆ ಮುಳುವಾದ ದುಬೈ!

0
232
Tap to know MORE!

ದಕ್ಷಿಣ ಕನ್ನಡದಲ್ಲಿ ಮಂಗಳವಾರ ಜೂನ್ 16 ರಂದು 79 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ. ಅದರೊಂದಿಗೆ, ಇಂದು ರಾಜ್ಯದಲ್ಲೇ ಅತೀ ಹೆಚ್ಚು ಸೋಂಕಿತರು ಬೆಳಕಿಗೆ ಬಂದ ಜಿಲ್ಲೆಯೆಂದು ವರದಿಯಾಗಿದೆ. ನಂತರದಲ್ಲಿ, ಕಲಬುರ್ಗಿ(63) ಮತ್ತು ಬಳ್ಳಾರಿ(53) ಜಿಲ್ಲೆಯಲ್ಲಿ ೫೦ಕ್ಕೂ ಹೆಚ್ಚಿನ ಹೊಸ ಸೋಂಕಿತರ ವರದಿಯಾಗಿದೆ. ನೆರೆಯ ಉಡುಪಿ ಜಿಲ್ಲೆಯಲ್ಲಿ ಇಂದು ಏಳು ಹೊಸ ಪ್ರಕರಣಗಳು ಪತ್ತೆಯಾಗಿವೆ.

ದಕ್ಷಿಣ ಕನ್ನಡದಲ್ಲಿ ಇಂದು ವರದಿಯಾದ ಬಹುತೇಕ ಎಲ್ಲಾ ಸೋಂಕಿತರು ದುಬೈನಿಂದ ಮರಳಿದವರಾಗಿರುತ್ತಾರೆ. ಎಲ್ಲರನ್ನೂ ಜಿಲ್ಲೆಯಲ್ಲಿ ನಿಗದಿಪಡಿಸಿದ COVID ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದರೊಂದಿಗೆ ರಾಜ್ಯದಲ್ಲಿ ಇಂದು ಒಟ್ಟು 317 ಸೋಂಕಿತರ ವರದಿಯಾಗಿದೆ ಹಾಗೂ 7 ಸೋಂಕಿತರು ಬಲಿಯಾಗಿದ್ದಾರೆ.
ಇಂದು ಸೋಂಕಿತರ ಸಂಖ್ಯೆಗಿಂತಲೂ ಹೆಚ್ಚು ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವುದು ( 322 ) ಸಮಾಧಾನಕರದ ಸಂಗತಿಯಾಗಿದೆ.

ಜಿಲ್ಲಾವಾರು ವರದಿ ಈ ಕೆಳಗಿನಂತಿದೆ .

LEAVE A REPLY

Please enter your comment!
Please enter your name here