ದಕ್ಷಿಣ ಕನ್ನಡದಲ್ಲಿ ಏಕದಿನ ಗರಿಷ್ಟ – ಉಡುಪಿಯಲ್ಲಿ 90!

0
156
Tap to know MORE!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ನಾಲ್ಕನೇ ದಿನ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದ್ದು, ಇಂದು ದಾಖಲೆಯ 186 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ. ಒಟ್ಟಾರೆಯಾಗಿ, ಜಿಲ್ಲೆಯಲ್ಲಿ ಇದು ಕೇವಲ ಐದನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ.

ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಇದುವರೆಗೆ ಒಟ್ಟು 22,832 ಮಾದರಿಗಳನ್ನು ವರದಿಗಳು ಬಂದಿದೆ. ಅದರಲ್ಲಿ 2034 ಜನರ ವರದಿಗಳು ಪಾಸಿಟಿವ್ ಎಂದು ಬಂದಿದೆ. ಈ ಪೈಕಿ 1,211 ಪ್ರಕರಣಗಳು ಸಕ್ರಿಯವಾಗಿವೆ. ಇದರ ಮಧ್ಯೆ ಇಂದು 29 ಮಂದಿ ಸೇರಿದಂತೆ ಒಟ್ಟು 782 ಜನರು ಚೇತರಿಸಿ ಬಿಡುಗಡೆಯಾಗಿದ್ದಾರೆ.

ಇಂದಿನ ವರದಿಯಲ್ಲಿ, 37 ಸೋಂಕಿತರು ಇತರರ ಸಂಪರ್ಕದೊಂದಿಗೆ ಕೊರೋನಾ ಸೋಂಕನ್ನು ತಗುಲಿಸಿಕೊಂಡಿದ್ದಾರೆ. ಅದಲ್ಲದೆ ಇಂದಿನ 32 ಸೋಂಕಿತರ ಸಂಪರ್ಕದ ಮೂಲವೇ ತಿಳಿಯದೇ ಇರುವುದು ಜನತೆಗೆ ಮತ್ತಷ್ಟು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.

ಅದಲ್ಲದೆ ಇಂದಿನ ಜಿಲ್ಲಾ ಬುಲೆಟಿನ್ ಪ್ರಕಾರ 24 ಗಂಟೆಗಳಲ್ಲಿ ಜಿಲ್ಲೆಯ 3 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 40ಕ್ಕೆ ಏರಿದೆ. ಸಾವಿನ ಕಾರಣವನ್ನು ತಿಳಿಯಲು ಈಗಾಗಲೇ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ.

ಉಡುಪಿಯ ಮತ್ತೆ ಕೊರೋನಾ ಕೇಕೆ

ಉಡುಪಿಯಲ್ಲಿ ಕಳೆದ ಕೆಲವು ದಿನಗಳಿಂದ 20-30 ರ ಅಸುಪಾಸಿನಲ್ಲಿ ಸೋಂಕಿತರು ವರದಿಯಾಗುತ್ತಿದ್ದರು. ಇಂದು ದಾಖಲೆಯ 90 ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1,567ಗೆ ಏರಿದೆ. ಇವುಗಳಲ್ಲಿ 319 ಸಕ್ರಿಯ ಪ್ರಕರಣ ಸೇರಿದೆ.

LEAVE A REPLY

Please enter your comment!
Please enter your name here