ದಕ್ಷಿಣ ಕನ್ನಡದಲ್ಲಿ ಕೊರೋನಾಗೆ ಮತ್ತೊಂದು ಬಲಿ !

0
190
Tap to know MORE!

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಇಂದು ಕೊರೋನವೈರಸ್ ಗೆ ಮತ್ತೊಂದು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 14ಕ್ಕೆ ಏರಿದೆ. ಕಳೆದ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ 4 ಸೋಂಕಿತರು ಬಲಿಯಾಗಿರುತ್ತಾರೆ. ಮೃತ ಸೋಂಕಿತೆಯು 60 ವರ್ಷದ ಉಲ್ಲಾಲ್ ನಿವಾಸಿಯಾಗಿದ್ದಾರೆ.

ಮಹಿಳೆಯು ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅದಲ್ಲದೆ ಅವರು ಮಧುಮೇಹದಿಂದ ಬಳಲುತ್ತಿದ್ದರು.

ದಕ್ಷಿಣ ಕನ್ನಡವು ಜಿಲ್ಲೆಯಲ್ಲಿ ನಿನ್ನೆ,ಜೂನ್ 28 ರ ಭಾನುವಾರ, ಕೊರೋನವೈರಸ್ ನಿಂದ ಮೂರು ಸಾವುಗಳು ಸಂಭವಿಸಿತ್ತು.

ಭಾನುವಾರದ ವರೆಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 673 ಜನರು ಕೊರೋನಾಗೆ ತುತ್ತಾಗಿದ್ದು, 422 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಂದಿನ ಒಂದು ಸಾವು ಸೇರಿದಂತೆ, ಇದುವರೆಗೆ 14 ಸೋಂಕಿತರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here