ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ದಾಖಲೆಯ 147 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ. 24 ಘಂಟೆಗಳ ಲೆಕ್ಕಾಚಾರದಲ್ಲಿ ಇದು ಜಿಲ್ಲೆಯ ಮಟ್ಟಿಗೆ ದಾಖಲೆಯಾಗಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ.
ಜಿಲ್ಲೆಗೆ ಇಂದು ಒಟ್ಟು 378 ಮಾದರಿಗಳ ವರದಿಗಳು ಸ್ವೀಕರಿಸಲ್ಪಟ್ಟವು. ಅದರಲ್ಲಿ 147 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ. 576 ಮಾದರಿಗಳ ವರದಿಗಳು ಇನ್ನೂ ಬರಲಿದೆ.
ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಒಟ್ಟು 20,650 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಅದರಲ್ಲಿ 1,232 ಜನರ ವರದಿಗಳು ಪಾಸಿಟಿವ್ ಎಂದು ಬಂದಿದೆ., ಇದರಲ್ಲಿ ಇತರ ಜಿಲ್ಲೆಗಳ 10 ವ್ಯಕ್ತಿಗಳು ಸೇರಿದ್ದಾರೆ. ಈ ಪೈಕಿ 666 ಪ್ರಕರಣಗಳು ಸಕ್ರಿಯವಾಗಿವೆ. ಇದರ ಮಧ್ಯೆ ಇಂದು 38 ಮಂದಿ ಸೇರಿದಂತೆ ಒಟ್ಟು 554 ಜನರು ಚೇತರಿಸಿ ಬಿಡುಗಡೆಯಾಗಿದ್ದಾರೆ ಮತ್ತು ಇದುವರೆಗೆ ಜಿಲ್ಲೆಯಲ್ಲಿ 22 ಸೋಂಕಿತರು ಸಾವನ್ನಪ್ಪಿದ್ದಾರೆ.