ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 13 ಜಿಲ್ಲೆಗಳಲ್ಲಿ ಹಿಂದಿನ ನಿಯಮಗಳೇ ಅನ್ವಯ!

0
250
Tap to know MORE!

ಮಂಗಳೂರು: ಜೂನ್ 21 ರಿಂದ ಲಾಕ್‌ಡೌನ್ ನಿಯಮಗಳನ್ನು ಇನ್ನಷ್ಟು ಸಡಿಲಗೊಳಿಸಿ, ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಇದರನ್ವಯ, ಶೇ.5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ 16 ಜಿಲ್ಲೆಗಳಲ್ಲಿ ಅನ್ಲಾಕ್ ನಿಯಮಗಳು ಜಾರಿಯಾಗಲಿದೆ.

ಹಾಗೆಯೇ, ಶೇ 5 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ 13 ಜಿಲ್ಲೆಗಳಲ್ಲಿ ಹಿಂದಿನ ನಿಯಮಗಳಲ್ಲಿ ಸಡಿಲಿಕೆ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ಹಿಂದಿನ ನಿಯಮಗಳು ಮಾತ್ರ ಅನ್ವಯವಾಗಲಿದೆ.

ನಿಯಮಗಳು:

  • ರಸ್ತೆಗಿಳಿಯುತ್ತೆ ಆಟೋ, ಟ್ಯಾಕ್ಸಿ.. ಬಸ್ಗಿಲ್ಲ ಗ್ರೀನ್ ಸಿಗ್ನಲ್‌. ಆದ್ರೆ ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬೇಕು
  • ಅಂತರ್ ಜಿಲ್ಲೆ ಹಾಗೂ ಅಂತರ್ ರಾಜ್ಯ ಸಂಚಾರಕ್ಕೆ ಅವಕಾಶ.
  • ಮಧ್ಯಾಹ್ನ 2ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ
  • ಪಾರ್ಕ್ಗಳಲ್ಲಿ ವಾಯುವಿಹಾರ ಮಾಡಲು ಬೆಳಗ್ಗೆ 5ಗಂಟೆಯಿಂದ 10ಗಂಟೆವರೆಗೆ ಪಾರ್ಕ್‌ಗಳು ಓಪನ್ ಇರುತ್ತೆ.
  • ವಾಣಿಜ್ಯ ಚಟುವಟಿಕೆಗಳಿಗೂ ಅನುಮತಿ ಕೊಡಲಾಗಿದೆ.
  • ಎಲ್ಲ ರೀತಿಯ ಕಾರ್ಖಾನೆಗಳನ್ನ ತೆರೆಯಲು ಅನುಮತಿ – ಶೇ. 50ರಷ್ಟು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಬೇಕು. ಅಲ್ಲದೇ ಶೇ. 30ರಷ್ಟು ಸಿಬ್ಬಂದಿಯೊಂದಿಗೆ ಗಾರ್ಮೆಂಟ್ಸ್ ತೆರೆಯಬಹುದು. ಇನ್ನು ಕಟ್ಟಡ ಕಾಮಗಾರಿಗಳಿಗೆ ಬೇಕಾದ ಸಿಮೆಂಟ್, ಸ್ಟೀಲ್ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ.
  • ಮದ್ಯಪ್ರಿಯರಿಗೆ ‘ಮಧ್ಯಾಹ್ನ’ದವರೆಗೂ ಕಿಕ್ – ಮಧ್ಯಾಹ್ನ 2 ರವರೆಗೆ ಅನುಮತಿ
  • ನೈಟ್‌, ವೀಕೆಂಡ್‌ ‘ಲಾಕ್’..! ಸಂಜೆ 7ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿ ಮತ್ತು ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತೆ.

LEAVE A REPLY

Please enter your comment!
Please enter your name here