ದಕ್ಷಿಣ ಕನ್ನಡ: ನಾಳೆಯಿಂದ ಸಂಜೆ 5 ಗಂಟೆಯವರೆಗೆ ಅಂಗಡಿ ತೆರೆಯಲು ಅನುಮತಿ | ವಾರಾಂತ್ಯ ಕರ್ಫ್ಯೂ ನಿಯಮವೂ ಸಡಿಲ

0
212
Tap to know MORE!

ಮಂಗಳೂರು: ಕೊರೋನಾ ಸೊಂಕು ನಿಯಂತ್ರಣ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ನಾಳೆ ಶುಕ್ರವಾರದಿಂದ ಬೆಳಗ್ಗೆ 7 ರಿಂದ 5 ರವರೆಗೆ ಅಂಗಡಿ ಮುಗ್ಗಟ್ಟು ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಸಂಚಾರಕ್ಕೂ ಅವಕಾಶ ನೀಡಲಾಗಿದೆ.

ಹಾಗೆಯೇ, ವಾರಾಂತ್ಯದ ಕರ್ಫ್ಯೂ ನಿಯಮವನ್ನೂ ಸಡಿಲಿಸಲಾಗಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಕೆಲವು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆಹಾರ, ದಿನಸಿ, ಹಾಲು, ತರಕಾರಿ, ಮದ್ಯದಂಗಡಿ, ನ್ಯಾಯಬೆಲೆ ಅಂಗಡಿ, ಬೀದಿಬದಿ ವ್ಯಾಪಾರಸ್ಥರಿಗೆ ವಾರಾಂತ್ಯದಲ್ಲಿ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ.

ಆಳ್ವಾಸ್‌ನಲ್ಲಿ ಬೃಹತ್ ವಿದ್ಯಾರ್ಥಿ ಲಸಿಕಾ ಅಭಿಯಾನ | ಎರಡು ದಿನದಲ್ಲಿ 3,563 ಫಲಾನುಭವಿಗಳಿಗೆ ಲಸಿಕೆ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಆದೇಶದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿಯಿಂದ ಜಿಲ್ಲಾ ಗೈಡ್‌ಲೈನ್ ಬಿಡುಗಡೆ ಮಾಡಲಾಗಿದೆ. ಜುಲೈ 5 ರವರೆಗೆ ಪ್ರಸ್ತುತ ಸರ್ಕಾರದ ಆದೇಶ ಜಾರಿಯಲ್ಲಿರಲಿದೆ

LEAVE A REPLY

Please enter your comment!
Please enter your name here