ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತಿಬ್ಬರು ಬಲಿ!

0
132
Tap to know MORE!

ಜೂನ್ 28 ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನವೈರಸ್‌ನಿಂದಾಗಿ ಇಬ್ಬರು ಬಲಿಯಾಗಿರುವುದು ವರದಿಯಾಗಿವೆ. ಮೃತಪಟ್ಟವರಲ್ಲಿ ಒಬ್ಬರು ಬಂಟ್ವಾಳ ಮೂಲದ 57 ವರ್ಷದ ಮಹಿಳೆ, ಇನ್ನೊಬ್ಬರು ಸುರತ್ಕಲ್ ಇಡ್ಯಾದ 31 ವರ್ಷದ ವ್ಯಕ್ತಿ.

ಬಂಟ್ವಾಳದ ರೋಗಿಯು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರೆ, ಸುರತ್ಕಲ್ ಮೂಲದ ರೋಗಿಯು ವೆನ್ಲಾಕ್ ನಲ್ಲಿ ಕೊನೆಯುಸಿರೆಳೆದರು.

ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 12 ಕ್ಕೆ ಏರಿದೆ.

ಜೂನ್ 27 ರ ಶನಿವಾರ ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಇದುವರೆಗೆ ಒಟ್ಟು 12,919 ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಅದರಲ್ಲಿ 12,198 ಜನರ ಫಲಿತಾಂಶ ಋಣಾತ್ಮಕವಾಗಿದೆ ಮತ್ತು 576 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಇತರ ಜಿಲ್ಲೆಗಳ 10 ವ್ಯಕ್ತಿಗಳು ಸೇರಿದ್ದಾರೆ. ಈ ಪೈಕಿ 148 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ ಮತ್ತು 416 ಜನರು ಚೇತರಿಸಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here