ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13ನೇ ಬಲಿ ಪಡೆದ ಕೊರೋನಾ!

0
76

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನವೈರಸ್ 13 ನೇ ಬಲಿಯನ್ನು ಪಡೆದುಕೊಂಡಿದೆ. ಮೃತ ವ್ಯಕ್ತಿಯು 51 ವರ್ಷದ ಮಹಿಳೆಯಾಗಿದ್ದು, ಜೋಕಟ್ಟೆ ನಿವಾಸಿಯಾಗಿರುತ್ತಾರೆ.

ಮಹಿಳೆಯು ಕ್ಷಯರೋಗದಿಂದ ಬಳಲುತ್ತಿದ್ದಳು. ಜೂನ್ 26 ರ ಸಂಜೆ ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆಕೆಗೆ ಕೊರೋನವೈರಸ್ ಪರೀಕ್ಷಿಸಲಾಯಿತು. ಫಲಿತಾಂಶದಲ್ಲಿ ಆಕೆ ವೈರಸ್‌ಗೆ ತುತ್ತಾಗಿರುವುದು ಕಂಡುಬಂದಿದೆ.

ಇದರಿಂದ ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ ಕೊರೋನವೈರಸ್‌ನಿಂದಾಗಿ ಮೂರು ಸಾವುಗಳು ವರದಿಯಾಗಿವೆ. ಬಂಟ್ವಾಳ ಮೂಲದ 57 ವರ್ಷದ ಮಹಿಳೆ ಮತ್ತು ಸುರತ್ಕಲ್ ಮೂಲದ 31 ವರ್ಷದ ವ್ಯಕ್ತಿ ಕೊರೋನವೈರಸ್ ಗೆ ಈ ಮೊದಲು ಬಲಿಯಾಗಿದ್ದರು

LEAVE A REPLY

Please enter your comment!
Please enter your name here