ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನವೈರಸ್ನಿಂದಾಗಿ ಇಂದು ಒಂದೇ ದಿನ ಮೂರು ಸಾವುಗಳು ದಾಖಲಾಗಿವೆ.
ಅನಾರೋಗ್ಯದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮತ್ತು ಹೃದಯಾಘಾತದಿಂದ ಸಾವನ್ನಪ್ಪಿದ ಸುಳ್ಯ ತಾಲೂಕಿನ ಕೆರೆಮೂಲೆ ನಿವಾಸಿ, ವೃದ್ಧ ಮಹಿಳೆಯ ಕೋವಿಡ್ -19 ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ.
ಇದೀಗ ಮತ್ತೆ ಇಬ್ಬರು ಸೋಂಕಿತರ ಸಾವಿನೊಂದಿಗೆ, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಈಗ 22 ಕ್ಕೆ ತಲುಪಿದೆ.
ಉಸಿರಾಟದ ತೊಂದರೆ ಎದುರಿಸುತ್ತಿದ್ದ ಕೂಳೂರಿನ 65 ವರ್ಷದ ಮಹಿಳೆ ಮತ್ತು ಕೋಡಿಕ್ಕಲ್ನ 67 ವರ್ಷದ ಪುರುಷ ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಇಬ್ಬರಿಗೂ ಕೋವಿಡ್–19 ಸೋಂಕು ತಗುಲಿರುವುದು ಖಚಿತಪಟ್ಟಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.