ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ದಕ್ಷಿಣ ಕನ್ನಡ ಜಿಲ್ಲೆಯು ಅತಿ ಹೆಚ್ಚು ಸೋಂಕಿತರಿರುವ ಜಿಲ್ಲೆಯಾಗುತ್ತಿರುವ ಜಿಲ್ಲೆಯಾಗುತ್ತಿದೆ. ಒಂದೆಡೆ ಇತರ ದೇಶಗಳಿಂದ ಅನಿವಾಸಿ ಭಾರತೀಯರು ತಾಯ್ನಾಡಿಗೆ ಮರಳುತ್ತಿದ್ದರೆ, ಮತ್ತೊಂದೆಡೆ ಈಗಾಗಲೇ ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡಿರಬಹುದೇ ಎಂಬ ಆತಂಕ ಜಿಲ್ಲೆಯ ಜನತೆಯಲ್ಲಿ ಮೂಡುತ್ತಿದೆ.
ಆದ್ದರಿಂದ ಕೊರೋನ ನಿಯಂತ್ರಿಸುವ ಸಲುವಾಗಿ ಜುಲೈ 8 ರಿಂದ ಜುಲೈ 25ರವರೆಗೆ ಜಿಲ್ಲೆಯಾದ್ಯಾಂತ ಸ್ವಯಂ ಪ್ರೇರಿತ ಲಾಕ್ಡೌನ್ ಮಾಡಲು ಜಿಲ್ಲೆಯ ವಿವಿಧ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೀಗ ಅಂತಹ ನಿರ್ಧಾರ ಎಲ್ಲೂ ಕೈಗೊಳ್ಳಲಿಲ್ಲ ಎಂಬ ಸತ್ಯ ಬಯಲಾಗಿದೆ. ಜನರ ದಾರಿ ತಪ್ಪಿಸಲು, ಯಾರೋ ತಪ್ಪು ಸಂದೇಶವನ್ನು ರವಾನಿಸಿರುವುದು ತಿಳಿದು ಬಂದಿದೆ.
ಮಧ್ಯಾಹ್ನದ ವರೆಗೆ ಮಾತ್ರ ವ್ಯಾಪಾರ-ವಹಿವಾಟು-ಓಡಾಟಗಳು ನಡೆಯಬೇಕು ಎಂದು ಸಂದೇಶ ಸಾರಿತ್ತು. ಆದರೆ ಅದು ಈಗ ಸುಳ್ಳು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.