ಮಂಗಳೂರು : ನಿನ್ನೆ ತಡರಾತ್ರಿ ಯುವಕನ ಮೇಲೆ ತಲವಾರಿನಿಂದ ದಾಳಿ

0
175
Tap to know MORE!

ಮಂಗಳೂರು ಡಿ 16 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮಾರಕಾಸ್ತ್ರಗಳನ್ನೂ ಜಲಪಿಸಿದ ಘಟನೆ ವರದಿಯಾಗಿದೆ. ಯುವಕನೋರ್ವನ ಮೇಲೆ ತಂಡವೊಂದು ಮಂಗಳೂರಿನ ಹೊರವಲಯ ಅಡ್ಡೂರಿನಲ್ಲಿ ತಲವಾರಿನಿಂದ ದಾಳಿ ನಡೆಸಿದೆ. ಕೃತ್ಯವೂ ಮಂಗಳವಾರ ರಾತ್ರಿ ಸಂಭವಿಸಿದೆ.

ತಲವಾರು ದಾಳಿಗೆ ಒಳಗಾದ ಯುವಕನನ್ನು ಅಡ್ಡೂರು ನಿವಾಸಿ ಮಹಮ್ಮದ್ ತಾಜುದ್ದೀನ್ (30) ಎಂದು ಗುರುತಿಸಲಾಗಿದೆ. ಮೂವರ ದುಷ್ಕರ್ಮಿಗಳ ತಂಡ ಈತನ ಮೇಲೆ ಮಚ್ಚು ಬೀಸಿದ್ದು ಯುವಕನ ತೊಡೆ ಭಾಗ, ಕೈ ಸಹಿತ ವಿವಿದೆಡೆ ಗಾಯಗಳಾಗಿವೆ‌.

ಇದನ್ನೂ ಓದಿ: ಮಂಗಳೂರು : ರೌಡಿಶೀಟರ್‌ನ ಹತ್ಯೆ | ಕುದ್ರೋಳಿ ಬಳಿ ಶವ ಪತ್ತೆ!

ಯುವಕ ಅಡ್ಡೂರಿನಿಂದ ಮನೆ ಕಡೆ ತೆರಳುವ ವೇಳೆ ಯತ್ನ ನಡೆದಿದ್ದು ಈ ದಾಳಿಯು ಫರ್ವೀಝ್ ಹಾಗೂ ತಂಡದಿಂದ ನಡೆದಿದೆ ಎಂದು ಶಂಕಿಸಲಾಗಿದೆ. ದಾಳಿಯಿಂದ ಗಾಯಗೊಂಡಿರುವ ಯುವಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಹಳೇ ವೈಷ್ಯಮ್ಯದಿಂದ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದ್ದು , ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

VIDEO : ಫೆವಿಕಾಲ್ ಜಾಹೀರಾತಿನಲ್ಲಿ ಯಕ್ಷಗಾನದ ಅಪಚಾರ – ಕಲಾಪ್ರೇಮಿಗಳ ಆಕ್ರೋಶ!

LEAVE A REPLY

Please enter your comment!
Please enter your name here