ಡ್ರಗ್ಸ್ ದಂಧೆ : ನಟ ದಿಗಂತ್, ನಟಿ ಐಂದ್ರಿತಾ ರೇ ಗೆ ಸಿಸಿಬಿ ನೋಟೀಸ್

0
77

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​​ಗೆ ಸಂಬಂಧಿಸಿದಂತೆ ಇಂದು ಸಿಸಿಬಿ ನಟ ದಿಗಂತ್ ಮತ್ತು ನಟಿ ಐಂದಿತಾ ರೇಗೆ ನೋಟಿಸ್ ಹೊರಡಿಸಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿ ಎದುರು ದಿಗಂತ್ ಮತ್ತು ಐಂದ್ರಿತಾಗೆ ಹಾಜರಾಗುವಂತೆ ಹೇಳಿದೆ.

ಸದ್ಯ ಡ್ರಗ್ಸ್ ಲಿಂಕ್ ಆರೋಪದಲ್ಲಿ ಬಂಧಿತರಾಗುರವವರ ಜೊತೆಗೆ ಇವರಿಬ್ಬರೂ ಗುರುತಿಸಿಕೊಂಡಿದ್ದಾರೆ ಅನ್ನೋ ಆರೋಪ ಇದೆ. ಅಲ್ಲದೇ ಬಂಧಿತ ಕೆಲ ಆರೋಪಿಗಳು ಇವರ ಹೆಸರನ್ನ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಅನೇಕ ಬಾರಿ ವೈಭವ್ ಜೈನ್ ಮತ್ತು ವಿರೇನ್ ಆಯೋಜಿತ ಪಾರ್ಟಿಯಲ್ಲೂ ಭಾಗಿಯಾಗಿದ್ದಾರೆ ಅಂತಾ ಹೇಳಲಾಗಿದೆ.

ಇತ್ತೀಚೆಗೆ ಐಂದ್ರಿತಾ ವಿಡಿಯೋ ವೈರಲ್ ಆಗಿತ್ತು. ಶ್ರೀಲಂಕಾದ ಕೆಸಿನೋ ಪಾರ್ಟಿಗೆ ಐಂದ್ರಿತಾ ಇನ್ವೈಟ್ ಮಾಡಿದ್ದರು. ಶೇಖ್ ಪಾಸಿಲ್ ಪಾರ್ಟಿಗಳಿಗೆ ನಟಿ ಐಂದ್ರಿತಾ ಇನ್ವೈಟ್ ಮಾಡ್ತಿದ್ದರು ಎನ್ನಲಾಗಿದ್ದು ಇದೇ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಎನ್ನುವ ಮಾಹಿತಿ ಇದೆ.

ಇನ್ನೊಂದೆಡೆ ರಾಹುಲ್ ಜೊತೆ ಮತ್ತೊಬ್ಬ ಆರೋಪಿ ಶೇಖ್ ಫಾಸಿಲ್ ಸಂಂಪರ್ಕದಲ್ಲಿದ್ದ ಎನ್ನಲಾಗಿದ್ದು. ಈ ಶೇಖ್ ಪಾಸಿಲ್​ಗಾಗಿ ಸದ್ಯ ಹುಡುಕಾಟ ನಡೆಯುತ್ತಿದೆ. ಶೇಖ್ ಫಾಜಿಲ್ ಬಗ್ಗೆ ಐಂದ್ರಿತಾಗೆ ಮಾಹಿತಿ ಇರೋ ಹಿನ್ನೆಲೆ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here