ಮತ್ತೆ ಅಧಿಕಾರಕ್ಕೆ ಬಂದರೆ, ಆರ್ಟಿಕಲ್ 370 ಯನ್ನು ಪುನಃ ಜಾರಿಗೆ ತರಲಾಗುವುದು: ದಿಗ್ವಿಜಯ್ ಸಿಂಗ್

0
210
Tap to know MORE!

ಭೋಪಾಲ್: ಸಾಮಾನ್ಯವಾಗಿ ತಮ್ಮ ಹೇಳಿಕೆಗಳಿಂದ ಸದ್ದು ಮಾಡುವ ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಹೆಳಿಕೆ ಮತ್ತೊಮ್ಮೆ ವಿವಾದ ಸೃಷ್ಟಿಸಿದೆ. Clubhouse chatನಲ್ಲಿ ಅವರು ಆರ್ಟಿಕಲ್ 370ರ ವಿಚಾರವಾಗಿ ಪಾಕಿಸ್ತಾನಿ ಪತ್ರಕರ್ತ ಕೇಳಿಗೆ ಪ್ರಶ್ನೆಗೆ ಉತ್ತರಿಸಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370ನ್ನು ಮತ್ತೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್‌ಗೆ 2021ರ ಪುಲಿಟ್ಜರ್ ಪ್ರಶಸ್ತಿ

ಕ್ಲಬ್‌ ಹೌಸ್‌ನಲ್ಲಿ ನಡೆಸುತ್ತಿದ್ದ ಸಂಭಾಷಣೆಯಲ್ಲಿ ದಿಗ್ವಿಜಯ್ ಸಿಂಗ್ ಇಂತಹುದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಂವಾದ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಈರ್ವ ಪತ್ರಕರ್ತನೂ ಭಾಗಿಯಾಗಿದ್ದ ಎನ್ನಲಾಗಿದೆ. ವೈರಲ್ ಆಗುತ್ತಿರುವ ಆಡಿಯೋದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್ಟಿಕಲ್ 370ನ್ನು ರದ್ದುಗೊಳಿಸಿದ್ದು ನಿಜಕ್ಕೂ ದುಃಖಕರ ವಿಚಾರ. ದಿಗ್ವಿಜಯ್ ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಬಿಜೆಪಿ ನಾಯಕ ಅಮಿತ್ ಮಾಳವೀಯರವರು ಕಾಂಗ್ರೆಸ್‌ ನಾಯಕ ಆರ್ಟಿಕಲ್ 370ತ್ತು ಮರು ಜಾರಿಗೊಳಿಸುವ ಬಗ್ಗೆ ಕ್ಲಬ್‌ ಹೌಸ್ ಚಾಟ್‌ನಲ್ಲಿ ನೀಡಿರುವ ಹೇಳಿಕೆಯ ಒಂದು ತುಣುಕನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ದಿಗ್ವಿಜಯ್ ಏನು ಬಯಸುತ್ತಾರೋ, ಪಾಕಿಸ್ತಾನ ಅದನ್ನೇ ಬಯಸುತ್ತಿದೆ. ದೇಶದ ಹಿರಿಯ ನಾಯಕರಾಗಿ ಅವರು ಪಾಕಿಸ್ತಾನಿ ಭಾಷೆ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

LEAVE A REPLY

Please enter your comment!
Please enter your name here