ರಾಷ್ಟ್ರ ಮತ್ತು ಯೋಧರಿಗೆ ಗೌರವ ಸಲ್ಲಿಸುವ ಮೂಲಕ ದೀಪಾವಳಿ ಆಚರಿಸಿ : ಪ್ರಧಾನಿ ಮೋದಿ ಕರೆ

0
80
Tap to know MORE!

ನವದೆಹಲಿ: ದೀಪಾವಳಿ ಸಂಭ್ರಮವನ್ನು ರಾಷ್ಟ್ರ ಮತ್ತು ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಆಚರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶದ ಸೈನಿಕರ ಧೈರ್ಯ, ಸಾಹಸ, ತ್ಯಾಗ, ಬಲಿದಾನಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಪದಗಳು ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರತೀ ವರ್ಷದಂತೆ ಈ ವರ್ಷವೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೀಪಾವಳಿ ಹಬ್ಬವನ್ನು ದೇಶದ ಗಡಿ ಕಾಯುವ ವೀರ ಯಧರೊಂದಿಗೆ ಆಚರಿಸಿಕೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಜೈಸಲ್ಮೇರ್ನ ಲಾಂಗ್ವಾಲಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆಂದು ತಿಳಿದುಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ರಕ್ಷಣಾ ಸಚಿವ ಬಿಪಿನ್ ರಾವತ್, ಭಾರತೀಯ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಹಾಗೂ ಬಿಎಸ್ಎಫ್ ಮಹಾಪ್ರಧಾನ ನಿರ್ದೇಶಗ ರಾಕೇಶ್ ಆಸ್ತಾನಾ ಅವರು ಸಾಥ್ ನೀಡಲಿದ್ದಾರೆಂದು ವರದಿಗಳು ತಿಳಿಸಿವೆ.

2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೋದಿಯವರು ಯೋಧರ ಜೊತೆಗೆ ದೀಪಾವಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾದಿ ಮೋದಿಯವರು ಇಷ್ಟು ವರ್ಷ ಕಾಶ್ಮೀ ಮತ್ತು ದೇಶದ ಉತ್ತರ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಯೋಧರಿಗೆ ಸಿಹಿ ನೀಡಿ, ಅವರೊಂದಿಗೆ ಕಾಲ ಕಳೆಯುತ್ತಿದ್ದರು.

ಈ ದೀಪಾವಳಿ ಹಬ್ಬದ ದಿನ ನಮ್ಮ ರಾಷ್ಟ್ರವನ್ನು ನಿರ್ಭಯವಾಗಿ ರಕ್ಷಿಸುವ ಸೈನಿಕರನ್ನು ಗೌರವಿಸುವುದಕ್ಕಾಗಿ ದೀಪವನ್ನು ಬೆಳಗಿಸೋಣ. ನಮ್ಮ ಸೈನಿಕರ ಧೈರ್ಯಕ್ಕೆ ಕೃತಜ್ಞತೆ ಸಲ್ಲಿಸಲುವುದಕ್ಕೆ ಪದಗಳನ್ನಷ್ಟೇ ಬಳಸಿದರೆ ನ್ಯಾಯ ಸಿಗುವುದಿಲ್ಲ. ಗಡಿಯಲ್ಲಿ ನಿಂತು ದೇಶ ರಕ್ಷಿಸುತ್ತಿರುವ ಯೋಧರ ಕುಟುಂಬವನ್ನು ಕೂಡಾ ಗೌರವಿಸಬೇಕಿದೆ ಎಂದು ಮೋದಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗುರೆಜ್ ಸೆಕ್ಟರ್ ಹಾಗೂ ಉರಿ ಸೆಕ್ಟರ್ ನಲ್ಲಿ ಶುಕ್ರವಾರ ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಯಲ್ಲಿ ಪಾಕಿಸ್ತಾನ ಸೇನೆಯು ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾದ ಬೆನ್ನಲ್ಲೇ ಪ್ರಧಾನಿ ಮೋದಿ ಈ ಕುರಿತು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here