ದುಗ್ಗಣ್ಣ ಸಾವಂತರ ದಾರ್ಶನಿಕ ವ್ಯಕ್ತಿತ್ವ ನಮಗೆಲ್ಲರಿಗೂ ಮಾದರಿ : ಸಂತೋಷ್ ದೇವಾಡಿಗ

0
172
Tap to know MORE!

ಪಡುಪಣಂಬೂರು: ಮೂಲ್ಕಿ ಸೀಮೆಯ ಗೌರವಯುತ ನ್ಯಾಯಪೀಠದ ಸ್ಥಾನಕ್ಕೆ ವಿಶೇಷ ಮನ್ನಣೆಯನ್ನು ನೀಡಿದ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ದಾರ್ಶನಿಕ ವ್ಯಕ್ತಿತ್ವ ಮಾದರಿಯಾಗಿದೆ. ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ಮೂಲ್ಕಿ ಅರಮನೆಯ ಗತವೈಭವ ಶಾಶ್ವತವಾಗಿ ಮಿನುಗಿತ್ತಿರಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ಸಂತೋಷ್ ದೇವಾಡಿಗ ಹೇಳಿದರು.

ಅವರು ಪಡುಪಣಂಬೂರು ಗ್ರಾಮದ ಮೂಲ್ಕಿ ಅರಮನೆಯಲ್ಲಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರ 12ನೇ ವರ್ಷದ ವರ್ಧಂತ್ಯೋತ್ಸವದ ಪ್ರಯುಕ್ತ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್‌ನ ಪರವಾಗಿ ಅವರನ್ನು ವಿಶೇಷವಾಗಿ ಗೌರವಿಸಿ ಮಾತನಾಡಿದರು.

ಇದನ್ನೂ ಓದಿ: ತೋಕೂರು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಹರಿದಾಸ ಭಟ್ ಆಯ್ಕೆ

ಗೌರವವನ್ನು ಸ್ವೀಕರಿಸಿದ ದುಗ್ಗಣ್ಣ ಸಾವಂತರು, “ಸೀಮೆಯ ಹಲವಾರು ಸಮಾಜ ಕಾರ್ಯಗಳಿಗೆ ಪ್ರೇರಣೆಯಾಗಿರುವ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್‌ನ ಚಟುವಟಿಕೆಗಳನ್ನು ಹತ್ತಿರದಿಂದ ತಿಳಿದುಕೊಂಡಿದ್ದೇನೆ. ಯುವ ಸಮುದಾಯಕ್ಕೆ ಸೂಕ್ತವಾದ ಮಾರ್ಗದರ್ಶನ ನೀಡುವ ಸಂಕಲ್ಪ ಮೆಚ್ಚುವಂತದ್ದು, ಮೂಲ್ಕಿ ಸೀಮೆ ಅರಸು ಕಂಬಳದ ಸಮಯದಲ್ಲಿ ಕ್ಲಬ್‌ನಿಂದ ನೀಡುತ್ತಿರುವ ಸಹಕಾರವನ್ನು ಮರೆಯುವಂತಿಲ್ಲ. ಈ ಬಾಂಧವ್ಯ ನಿತ್ಯ ನಿರಂತರವಾಗಿರಲಿ” ಎಂದರು.

ಮೂಲ್ಕಿ ಅರಮನೆಯ ಗೌತಮ್ ಜೈನ್, ಪಡುಪಣಂಬೂರು ಗ್ರಾ.ಪಂ.ನ ಮಾಜಿ ಸದಸ್ಯ ಸಂತೋಷ್‌ಕುಮಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ನರೇಂದ್ರ ಕೆರೆಕಾಡು, ಜೊತೆ ಕಾರ್ಯದರ್ಶಿ ಗಣೇಶ್ ದೇವಾಡಿಗ, ಕೋಶಾಧಿಕಾರಿ ಸಂಪತ್ ದೇವಾಡಿಗ, ತಂಡದ ನಾಯಕ ಗೌತಮ್ ಬೆಲ್ಚಡ, ಪರಿಸರ ಸಂರಕ್ಷಣಾ ಕಾರ್ಯದರ್ಶಿ ಸುನಿಲ್ ದೇವಾಡಿಗ, ಆಂತರಿಕ ಲೆಕ್ಕ ಪರಿಶೋಧಕ ಸುಭಾಸ್, ಸದಸ್ಯ ಜಗದೀಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಜಗದೀಶ್ ಕುಲಾಲ್ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್‌ಕುಮಾರ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here