ದುಬೈ ಮತ್ತು ಕುವೈಟ್ನಲ್ಲಿ ಸಿಲುಕಿದ್ದ ಅನಿವಾಸಿ ಕನ್ನಡಿಗರನ್ನು, ವಂದೇ ಭಾರತ್ ಮಿಷನ್ನ ಅಡಿಯಲ್ಲಿ ಶನಿವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಮೂರು ವಿಮಾನಗಳಲ್ಲಿ, ಒಟ್ಟು 423 ಪ್ರಯಾಣಿಕರು ಆಗಮಿಸಿದ್ದು, ಅವರನ್ನು ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ದುಬೈನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ 90 ಪ್ರಯಾಣಿಕರು ಮತ್ತು ಫ್ಲೈ ದುಬೈ ಚಾರಿಟಿ ವಿಮಾನವು 168 ಅನಿವಾಸಿ ಕನ್ನಡಿಗರನ್ನು ಕರೆತಂದಿದೆ. ಇನ್ನೊಂದು ವಿಮಾನವು ಕುವೈಟ್ನಿಂದ ಮಂಗಳೂರಿಗೆ ನಿನ್ನೆ ರಾತ್ರಿ ಆಗಮಿಸಿದ್ದು, 165 ಪ್ರಯಾಣಿಕರು ತಾಯ್ನಾಡು ತಲುಪಿದ್ದಾರೆ.
ಕೊನೆಗೂ ಕುವೈಟ್ನಿಂದ ಬಂದ ವಿಮಾನ
ಕುವೈಟ್ನ ಕೇರಳ ಮುಸ್ಲಿಂ ಎಸೋಸಿಯೇಷನ್ನ ಕರ್ನಾಟಕ ಶಾಖೆಯು ಚಾರಿಟಿ ವಿಮಾನವನ್ನು ವ್ಯವಸ್ಥೆಗೊಳಿಸಿದ್ದು, ಜೂ.27ರಂದೇ ಮಂಗಳೂರಿಗೆ ಆಗಮಿಸಬೇಕಾಗಿತ್ತು. ತಾಂತ್ರಿಕ ಕಾರಣದಿಂದ ಕೊನೆಯ ಕ್ಷಣದಲ್ಲಿ ವಿಮಾನವು ರದ್ದುಗೊಂಡಿದ್ದರಿಂದ, 165 ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ನಂತರ ವಿಮಾನಯಾನದ ದಿನಾಂಕವನ್ನು ಜು. 7ಕ್ಕೆ ಮುಂದೂಡಲಾಗಿತ್ತು.
ಅನೀರಿಕ್ಷಿತ ಬೆಳವಣಿಗೆಯಲ್ಲಿ ಜೂ.30ರಂದು ಕುವೈಟ್ ಸಾಮಾಜ ಸೇವಕ ಮೋಹನ್ ದಾಸ್ ಪರಿಶ್ರಮದಿಂದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಎಂಎಲ್ಸಿ ಕ್ಯಾಪ್ಟನ್ ಗಣೀಶ್ ಕಾರ್ಣಿಕ್ ಅವರ ಸಹಕಾರದಿಂದ, ಜು.4 ರ ಶನಿವಾರವೇ ಚಾರಿಟಿ ವಿಮಾನಯಾನಕ್ಕೆ ಅವಕಾಶ ಸಿಕ್ಕಂತಾಗಿತ್ತು.