ದೆಹಲಿಯಲ್ಲಿ ದೇಶದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್

0
220
Tap to know MORE!

ಹೊಸದಿಲ್ಲಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ದೆಹಲಿಯಲ್ಲಿ ದೇಶದಲ್ಲೇ ದೊಡ್ಡದಾದ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ. ದೆಹಲಿಯ ಹೊರವಲಯದ ವಿಶಾಲವಾದ ರಾಧಾ ಸೋಮಿ ಸತ್ಸಂಗ ಬಿಯಾಸ್ ಕ್ಯಾಂಪಸ್ ನಲ್ಲಿ ಸುಮಾರು 22 ಫುಟ್ಬಾಲ್ ಕ್ರೀಡಾಂಗಣದಷ್ಟು ವಿಸ್ತೀರ್ಣದಲ್ಲಿ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ.

ಏನಿದರ ವಿಶೇಷತೆ?
ಕ್ಯಾಂಪಸ್ 1,700 ಅಡಿ ಉದ್ದ ಹಾಗೂ 700 ಅಡಿ ಅಗಲ ಮತ್ತು 200 ಆವರಣಗಳನ್ನು ಹೊಂದಿದೆ. ಇಲ್ಲಿನ ನೆಲ ಮಣ್ಣಿನಿಂದ ಕೂಡಿದ್ದು ಕಾರ್ಪೆಟ್ ನಿಂದ ಮುಚ್ಚಲಾಗಿದೆ. ಇದರ ಮೇಲೆ ವಿನೈಲ್ ಶೀಟ್ ಹಾಕಿದ್ದು ಸ್ವಚ್ಛತೆ ಸುಲಭವಾಗಲಿದೆ. ಕ್ಯಾಂಪಸ್ ನ್ನು 116 ವಿಭಾಗ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ 88 ಬೆಡ್ ನಂತೆ 10,208 ಬೆಡ್ ಗಳನ್ನು ಅಳವಡಿಸಲಾಗುತ್ತದೆ. ಜುಲೈ ಮೊದಲ ವಾರದಲ್ಲಿ ಈ ಬೆಡ್ ಗಳು ಸಿದ್ಧವಾಗಲಿದೆ. ಈ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಇಂಡೋ ಟಿಬೆಟಿಯನ್ ಗಡಿ ಪಡೆಯನ್ನು ಬಳಸಿಕೊಳ್ಳಲಾಗಿದೆ.

ವ್ಯವಸ್ಥೆ ಯಾವ ರೀತಿ ಇದೆ?

ಪ್ರತಿ 5 ಅಡಿ ಅಂತರದಲ್ಲಿ ಒಂದು ಬೆಡ್ ಅಳವಡಿಸಲಾಗಿದೆ. ಕಬ್ಬಿಣದ ಮಂಚಕ್ಕೆ ಹೊದಿಕೆ, ಹಾಸಿಗೆ, ಮತ್ತು ದಿಂಬುಗಳನ್ನು ಕಲ್ಪಿಸಲಾಗಿದೆ. ಪ್ರತಿ ಬೆಡ್ ಗೆ ಒಂದು ಕುರ್ಚಿ, ಸ್ಟೂಲ್, ಮತ್ತು ಕಸದ ಡಬ್ಬಿಯನ್ನು ಇಡಲಾಗಿದೆ. 3 ಬೆಡ್ ಗಳಿಗೆ ಒಂದು ಪ್ಯಾನ್ ನಂತೆ ಅಳವಡಿಸಲಾಗಿದೆ. ಇದರ ಜತೆಗೆ 18,000 ಟನ್ ಹವಾ ನಿಯಂತ್ರಣ ವ್ಯವಸ್ಥೆಯೂ ಇದೆ. ಪ್ರತಿ ಬೆಡ್ ಗೆ ಮೊಬೈಲ್, ಲ್ಯಾಪ್ಟಾಪ್ ಚಾರ್ಜಿಂಗ್ ವ್ಯವಸ್ಥೆ ಇದೆ. ರೋಗಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ದೆಹಲಿ ಜಲಮಂಡಳಿಯು ನೀರು ಸರಬರಾಜು ಮಾಡಲಿದೆ. ಈ ಕೇಂದ್ರವು ಚೀನಾದ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕಿಂತ 10 ಪಟ್ಟು ದೊಡ್ಡದಾಗಿದೆ.

LEAVE A REPLY

Please enter your comment!
Please enter your name here