ದೆಹಲಿಯಲ್ಲಿ ಮತ್ತೊಂದು ಲಾಕ್ಡೌನ್ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದ ಕೇಜ್ರಿವಾಲ್

0
55

ದೆಹಲಿಯು ಮತ್ತೊಂದು ಲಾಕ್ಡೌನ್ ಗೆ ಸಾಕ್ಷಿಯಾಗಬಹುದೆಂಬ ಊಹಾಪೋಹಗಳಿಗೆ ಅಂತ್ಯ ಹಾಡಿದ ಅರವಿಂದ್ ಕೇಜ್ರಿವಾಲ್, ತಮ್ಮ ಸರ್ಕಾರಕ್ಕೆ ಅಂತಹ ಯಾವುದೇ ಯೋಚನೆ ಇಲ್ಲ ಎಂದು ಹೇಳಿದರು. “ದೆಹಲಿಯಲ್ಲಿ ಮತ್ತೊಂದು ಲಾಕ್ ಡೌನ್ ಯೋಜಿಸಲಾಗಿದೆಯೇ ಎಂದು ಅನೇಕ ಜನರು ಊಹಿಸುತ್ತಿದ್ದಾರೆ. ಅಂತಹ ಯಾವುದೇ ಯೋಜನೆಗಳಿಲ್ಲ ” ಎಂದು ದೆಹಲಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ಕೋವಿಡ್ -19 ದೊಂದಿಗೆ ಬದುಕಲು ನಾವು ಕಲಿಯಬೇಕಾಗಿದೆ ಮತ್ತು ಆರ್ಥಿಕ ಚಟುವಟಿಕೆಗಳು ಮತ್ತೆ ಜಾರಿಗೆ ಬರಬೇಕಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಂದಾಗಿ ಮತ್ತೊಂದು ಲಾಕ್‌ಡೌನ್‌ನ ವದಂತಿಗಳು ಹಬ್ಬಿತ್ತು. ಆರೋಗ್ಯ ತಜ್ಞರನ್ನು ಚಿಂತೆಗೀಡುಮಾಡುವ ಸಂಗತಿಯೆಂದರೆ, ದೆಹಲಿಯಲ್ಲಿ ಪ್ರಕರಣಗಳು(+5.2%) ದೇಶದ ಸರಾಸರಿಗಿಂತಲೂ(+3.8%) ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ (ಏಳು ದಿನಗಳ ಸರಾಸರಿ)

LEAVE A REPLY

Please enter your comment!
Please enter your name here