ಕೊರೋನಾ ಸೋಂಕಿನ ಭೀತಿಯ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿನ ಮುಜುರಾಯಿ ಇಲಾಖೆಯ ವ್ಯಾಪ್ತಿಯ ದೇಗುಲಗಳನ್ನು ಬಂದ್ ಮಾಡಿತ್ತು. ಆ ನಂತ್ರ ಅನ್ ಲಾಕ್ ಮಾರ್ಗಸೂಚಿಯಂತೆ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಆಧರಿಸಿ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿತ್ತು.
ಇದನ್ನೂ ಓದಿ : ಕೋಲುಮಂಡೆ ಜಂಗಮ ದೇವ ಯೂಟ್ಯೂಬ್ನಿಂದ ಡಿಲೀಟ್!
ರಾಜ್ಯದಲ್ಲಿನ ದೇಗುಲಗಳು ಭಕ್ತರ ದರ್ಶನಕ್ಕೆ ಅನ್ ಲಾಕ್ ಮಾರ್ಗಸೂಚಿಯಂತೆ ತೆರೆದುಕೊಂಡಿದ್ದವು. ಆದ್ರೇ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರವೇ ಅವಕಾಶ ನೀಡಲಾಗಿತ್ತೇ ಹೊರತು, ವಿವಿಧ ಸೇವೆಗಳಿಗೆ ಅವಕಾಶ ನೀಡಿರಲಿಲ್ಲ. ಸೆಪ್ಟೆಂಬರ್ 1ರಿಂದ ದೇವಾಲಯಗಳಲ್ಲಿ ಕ್ಷೀರಾಭಿಷೇಕ, ಕುಂಕುಮಾರ್ಚನೆ, ತುಲಾಭಾರ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಉರುಳು ಸೇವೆಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬುದಾಗಿ ಮುಜುರಾಯಿ ಇಲಾಖೆ ಮಾಹಿತಿಯ ಮೂಲದಿಂದ ತಿಳಿದು ಬಂದಿದೆ.