ದೇಶಕ್ಕಾಗಿ ಪ್ರಾಣ ನೀಡಿದ ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ : ಹುತಾತ್ಮ ಸಂತೋಷ್ ರ ತಾಯಿ

0
199
Tap to know MORE!

ಲಡಾಖ್‌ನ ಎಲ್‌ಎಸಿಯಲ್ಲಿ ಯುದ್ಧದ ವಾತಾವರಣ ಮೂಡಿತ್ತು. ಭಾರತ ಮತ್ತು ಚೀನಾ ನಡುವಿನ ಹೋರಾಟದಲ್ಲಿ, ಭಾರತೀಯ ಸೇನೆಯು ಚೀನಾ ದೇಶಕ್ಕೆ ದಿಟ್ಟ ಉತ್ತರವನ್ನು ನೀಡಿದೆ. ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದ ಚೀನಾ ದೇಶದ 43 ಸೈನಿಕರು ಈ ಸಂಘರ್ಷಣೆಯಲ್ಲಿ ಬಲಿಯಾದರು ಹಾಗೂ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಅವರ ಪೈಕಿ ಒಬ್ಬರು ಭಾರತೀಯ ಸೇನೆಯ ಕರ್ನಲ್ ಆಗಿದ್ದ ತೆಲಂಗಾಣ ಮೂಲದ ಬಿಕುಮುಲ್ಲಾ ಸಂತೋಷ್ ಬಾಬು.

ಈ ಕುರಿತು ಪ್ರತಿಕ್ರಿಯಿಸಿದ ಅವರ ತಾಯಿ ಮಂಜುಳ, ‘ದೇಶಕ್ಕಾಗಿ ಪ್ರಾಣ ನೀಡಿದ ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ. ಸೋಮವಾರ ರಾತ್ರಿ ನಮಗೆ ಈ ವಿಷಯ ತಿಳಿದಿತ್ತು’ ಎಂದರು.

‘ಮಗನ ಸಾವಿನ ಸುದ್ದಿ ಕೇಳಿದಾಗ, ಯಾವುದೇ ತಾಯಿಗಾದರೂ ನೋವಾಗುತ್ತದೆ. ಆದರೆ ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣವನ್ನು ಕೊಟ್ಟಿದ್ದಾರೆ ಎಂಬುವುದೊಂದು ಹೆಮ್ಮೆ’ ಎಂದರು.

ಹುತಾತ್ಮ ಕರ್ನಲ್ ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟೆ ನಿವಾಸಿ. ಸಂತೋಷ್‌ಗೆ 9 ವರ್ಷದ ಮಗಳು ಅಭಿನಯಾ ಮತ್ತು ನಾಲ್ಕು ವರ್ಷದ ಮಗ ಅನಿಲ್ ತೇಜ್ ಇದ್ದಾರೆ. ಸಂತೋಷ್ ಪ್ರಾಥಮಿಕ ಶಿಕ್ಷಣವನ್ನು ಸೂರ್ಯಪೇಟೆಯಲ್ಲಿ ಮುಗಿಸಿ ಪುಣೆಯಲ್ಲಿ ಪದವಿ ಪಡೆದರು. ನಂತರ ಅವರು ಭಾರತೀಯ ಸೇನೆಯನ್ನು ಸೇರಿದ್ದರು. ಸಂತೋಷ್ ಅವರು ಮೊದಲು ತಮ್ಮ ದೇಶ ಸೇವೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾರಂಭಿಸಿದ್ದರು. ಅವರು ಇತ್ತೀಚೆಗೆ ಹೈದರಾಬಾದ್‌ಗೆ ವರ್ಗಾವಣೆಯನ್ನು ಕೇಳಿದ್ದರು. ಆದರೆ ಅವರು ತವರಿಗೆ ಮರಳುವ ಮೊದಲೇ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರು.

LEAVE A REPLY

Please enter your comment!
Please enter your name here