ದೇಶದಲ್ಲಿ ಒಂದೇ ದಿನ 500ಕ್ಕೂ ಅಧಿಕ ಸೋಂಕಿತರು ಬಲಿ!

0
75

ಭಾರತದಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಮಂಗಳವಾರ ಸುಮಾರು 18,000 ಪ್ರಕರಣಗಳು ದಾಖಲಾಗಿ, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2.2 ಲಕ್ಷ ದಾಟಿದೆ. ಹೆಚ್ಚು ಪೀಡಿತ ರಾಜ್ಯ ಮಹಾರಾಷ್ಟ್ರದಲ್ಲಿ , 24 ಘಂಟೆಯಲ್ಲಿ ಸುಮಾರು 5 ಸಾವಿರ ಸೋಂಕಿತರ ವರದಿಯಾಗಿದೆ.

ಭಾರತವು ಕೊರೋನಾ ಸಾಂಕ್ರಾಮಿಕ ರೋಗದಿಂದ ಅತಿ ಹೆಚ್ಚು ಹಾನಿಗೊಳಗಾದ ನಾಲ್ಕನೇ ದೇಶವಾಗಿ ಮುಂದುವರೆದಿದ್ದು, ನಿನ್ನೆಯ ಒಟ್ಟು 17,876 ಹೊಸ ಸೋಂಕಿತರು ಸೇರಿ, ಈವರೆಗೆ ಒಟ್ಟು ಸೋಂಕಿತರ ಸಂಖ್ಯೆಯು 5,85,792 ಗೆ ತಲುಪಿದೆ.

ಇದರ ಮಧ್ಯೆ, ನಿನ್ನೆ ದೇಶದಲ್ಲಿ ಒಟ್ಟು 12,568 ಸೋಂಕಿತರು ಗುಣಮುಖರಾಗಿದ್ದು, ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 3,47,838 ಕ್ಕೆ ಏರಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 506 ಜನರು ಬಲಿಯಾಗಿದ್ದು, ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 17,410ಗೆ ತಲುಪಿದೆ ಎಂದು ವರದಿಯಾಗಿದೆ. ಅದಲ್ಲದೆ, ದೇಶದಲ್ಲಿ ಇದುವರೆಗೆ, 86,08,654 ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

ದಿನೇ ದಿನೇ ಸೋಂಕಿನ ಪರೀಕ್ಷೆಗೆ ಒಳಪಡಿಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದರಿಂದ, ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ಸುಮಾರು 2,10,292 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದುವರೆಗಿನ ದಾಖಲೆಯಾಗಿದೆ.

ಮಹಾರಾಷ್ಟ್ರವು ಭಾರತದಲ್ಲಿ ಅತೀ ಹೆಚ್ಚು ಸೋಂಕಿತರು ಇರುವ ರಾಜ್ಯವಾಗಿ (1.74 ಲಕ್ಷ) ಮುಂದುವರಿದಿದೆ. ತಮಿಳುನಾಡು(90,167) ಮತ್ತು ದೆಹಲಿ(87,360) ನಂತರದ ಸ್ಥಾನದಲ್ಲಿದೆ. ಈ ಮೂರು ರಾಜ್ಯಗಳ ಹೊರತಾಗಿ, ಬೇರೆ ಯಾವ ರಾಜ್ಯದಲ್ಲೂ 40,000 ಕ್ಕೂ ಅಧಿಕ ಸೋಂಕಿತರ ಪತ್ತೆಯಾಗಲಿಲ್ಲ.
ದೇಶದಲ್ಲಿ ಮುಂಬೈ ನಗರವು ಅತೀ ಹೆಚ್ಚು ಸೋಂಕಿತರು (77,658) ಇರುವ ನಗರವಾಗಿದೆ. ದೇಶದ ಬಹುತೇಕ ರಾಜ್ಯಗಳ ಸೋಂಕಿತರಿಗಿಂತ ಹೆಚ್ಚು ಸೋಂಕಿತರು ಮುಂಬೈ ನಗರದಲ್ಲಿದ್ದಾರೆ.

ಪ್ರಸ್ತುತ ದೇಶದಲ್ಲಿ 2,20,477 ಸಕ್ರಿಯ ಪ್ರಕರಣಗಳು ಇದ್ದು, 3,47,839 ಸೋಂಕಿತರು ಗುಣಮುಖರಾಗಿದ್ದಾರೆ. ಭಾರತದಲ್ಲಿ ಕೋವಿಡ್-19 ನಿಂದ ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು, ಸದ್ಯ ದೇಶದಲ್ಲಿ ಚೇತರಿಕೆ ಪ್ರಮಾಣವು ಶೇ.59.37ಕ್ಕೆ ಏರಿದೆ ಮತ್ತು ಸಾವಿನ ಪ್ರಮಾಣವು ಶೇ. 2.97 ರಷ್ಟಿದೆ.

ಕೊರೋನಾ ಸೋಂಕಿಗೆ ವಿಶ್ವದಲ್ಲಿ ಭಾರತವು ನಾಲ್ಕನೇ ಅತೀ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದ್ದು, ಅಮೇರಿಕಾ (27.2 ಲಕ್ಷ), ಬ್ರೆಜಿಲ್ (14 ಲಕ್ಷ) ಮತ್ತು ರಷ್ಯಾ (6.4 ಲಕ್ಷ ) ಮಾತ್ರ ಭಾರತಕ್ಕಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದೆ. ಭಾರತದಲ್ಲಿ ಜನಸಂಖ್ಯೆಯೂ ಹೆಚ್ಚಿದ್ದರೂ, ಪ್ರತಿ 10 ಲಕ್ಷಕ್ಕೆ ದೇಶದಲ್ಲಿ ಕೇವಲ 424 ಸೋಂಕಿತರಿರುತ್ತಾರೆ. ಇದು ಎಷ್ಟೋ ರಾಷ್ಟ್ರಗಳಿಗಿಂತ ಉತ್ತಮ ಸ್ಥಾನದಲ್ಲಿದೆ.

ದೇಶದ ಕೊರೋನಾ ಸೋಂಕಿನ ಕುರಿತು ಮತ್ತಷ್ಟು ವಿಸ್ತೃತವಾದ ವಿವರಗಳು ಇಲ್ಲಿದೆ ನೋಡಿ ಮತ್ತು ಜಗತ್ತಿನ ಕೊರೋನಾ ಅಂಕಿ ಅಂಶಗಳನ್ನು ಇಲ್ಲಿ ನೋಡಿ

LEAVE A REPLY

Please enter your comment!
Please enter your name here