ದೇಶದಲ್ಲಿ ಶೇ.62.66 ಸೋಂಕಿತರು ಗುಣಮುಖ | ಸಾವಿನ ಪ್ರಮಾಣ ಶೇ. 2.5% ಕ್ಕಿಂತ ಕಡಿಮೆ

0
188
Tap to know MORE!

ದೇಶದಲ್ಲಿ ಕೊರೋನಾ ಆರ್ಭಟದ ಮುಂದೆ ಚೇತರಿಕೆ ಪ್ರಮಾಣವೂ ಹೆಚ್ಚುತ್ತಿದ್ದು, ಇದುವರೆಗೆ ಶೇ‌.62.66 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಅದಲ್ಲದೆ ಸಾವಿನ ಪ್ರಮಾಣವು ಶೇ.25% ಕ್ಕಿಂತಲೂ ಕಡಿಮೆ ಆಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದ ಕೊರೋನವೈರಸ್ ಸೋಂಕಿತರ ಸಾವಿನ ಪ್ರಮಾಣ, ಮೊದಲ ಬಾರಿಗೆ ಶೇ. 2.5 ಕ್ಕಿಂತ ಕಡಿಮೆಯಾಗಿದೆ. ಭಾರತದಲ್ಲಿ ಸದ್ಯ ಸಾವಿನ ಪ್ರಮಾಣವು ಶೇ.2.49 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಇದು ಬಹಳಷ್ಟು ಮುಂದುವರೆದ ರಾಷ್ಟ್ರಗಳಿಗಿಂತ ಉತ್ತಮ ಅಂಶವಾಗಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 11 ಲಕ್ಷ ದಾಟಿದೆ. ಇವುಗಳ ಪೈಕಿ 7 ಲಕ್ಷಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ. ಇತ್ತೀಚೆಗೆ ಪ್ರತಿದಿನ 20 ಸಾವಿರಕ್ಕೂ ಅಧಿಕ ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮಂತ್ರಿ ಡಾ| ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.

ಭಾರತದ COVID-19 ಪ್ರಕರಣಗಳ ಸಾವಿನ ಪ್ರಮಾಣವು ಮೇ 12 ರ ಸುಮಾರಿಗೆ ಶೇ. 3.2 ಇತ್ತು. ಅಲ್ಲಿಂದ ಜೂನ್ 1 ರ ವೇಳೆಗೆ 2.82 ಕ್ಕೆ ಇಳಿದಿದೆ. ಇದೀಗ, ಜುಲೈ 10 ರಂದು 2.72 ಕ್ಕೆ ಮತ್ತು ಪ್ರಸ್ತುತ 2.49 ಕ್ಕೆ ಇಳಿದಿದೆ.

ಭಾರತದಲ್ಲಿ ಚೇತರಿಸಿಕೊಂಡ COVID-19 ಸೋಂಕಿತರ ಸಂಖ್ಯೆಯೂ ಏರುತ್ತಿದ್ದು, ಇದುವರೆಗೆ 7 ಲಕ್ಷಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 3,04,043 ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ತಿಳಿಸಿದೆ.

LEAVE A REPLY

Please enter your comment!
Please enter your name here