ದೇಶದಲ್ಲಿ 6.5 ಲಕ್ಷದ ಗಡಿ ತಲುಪಿದ ಸೋಂಕಿತರ ಸಂಖ್ಯೆ

0
99
Tap to know MORE!

ಭಾರತದಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ನಿನ್ನೆ ಒಂದೇ ದಿನ 22,000 ಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳ ದಾಖಲಾಗಿ, ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 6.5 ಲಕ್ಷದ ಗಡಿ ತಲುಪಿದೆ. 22 ಸಾವಿರಕ್ಕೂ ಅಧಿಕ ಸೋಂಕಿತರ ವರದಿಯಾಗಿರುವುದು ದೇಶದಲ್ಲಿ ಇದೇ ಮೊದಲಾಗಿದೆ. ಹೆಚ್ಚು ಪೀಡಿತ ರಾಜ್ಯ ಮಹಾರಾಷ್ಟ್ರದಲ್ಲಿ , ಸತತ ಎರಡನೇ ದಿನ 24 ಘಂಟೆಯಲ್ಲಿ 6 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ.

ಭಾರತವು ಕೊರೋನಾ ಸಾಂಕ್ರಾಮಿಕ ರೋಗದಿಂದ ಅತಿ ಹೆಚ್ಚು ಹಾನಿಗೊಳಗಾದ ನಾಲ್ಕನೇ ದೇಶವಾಗಿ ಮುಂದುವರೆದಿದ್ದು, ನಿನ್ನೆಯ ಒಟ್ಟು 22,721 ಹೊಸ ಸೋಂಕಿತರು ಸೇರಿ, ಈವರೆಗೆ ಒಟ್ಟು ಸೋಂಕಿತರ ಸಂಖ್ಯೆಯು 6,49,889 ಗೆ ತಲುಪಿದೆ. ಇದರಲ್ಲಿ, 2,36,835 ಸಕ್ರಿಯ ಪ್ರಕರಣಗಳಿವೆ. ಮೂರನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಒಟ್ಟು 6.6 ಲಕ್ಷ ಸೋಂಕಿತರ ವರದಿಯಾಗಿದೆ.

ಇದರ ಮಧ್ಯೆ, ನಿನ್ನೆ ದೇಶದಲ್ಲಿ ಒಟ್ಟು 14,417 ಸೋಂಕಿತರು ಗುಣಮುಖರಾಗಿದ್ದು, ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 3,94,319 ಕ್ಕೆ ಏರಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 444 ಜನ ಬಲಿಯಾಗಿದ್ದು, ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 18,669 ತಲುಪಿದೆ ಎಂದು ವರದಿಯಾಗಿದೆ. ಅದಲ್ಲದೆ, ದೇಶದಲ್ಲಿ ಇದುವರೆಗೆ, 92,97,749 ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

ದಿನೇ ದಿನೇ ಸೋಂಕಿನ ಪರೀಕ್ಷೆಗೆ ಒಳಪಡಿಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದರಿಂದ, ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ಸುಮಾರು 2,41,576 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಒಂದು ದಿನದ ವರದಿಯಲ್ಲಿ , ಭಾರತದ ದಾಖಲೆಯಾಗಿದೆ.

ಮಹಾರಾಷ್ಟ್ರವು ಭಾರತದಲ್ಲಿ ಅತೀ ಹೆಚ್ಚು ಸೋಂಕಿತರು ಇರುವ ರಾಜ್ಯವಾಗಿ (1.92 ಲಕ್ಷ) ಮುಂದುವರಿದಿದೆ. ತಮಿಳುನಾಡು (1.02 ಲಕ್ಷ) ಮತ್ತು ದೆಹಲಿ(94,675) ನಂತರದ ಸ್ಥಾನದಲ್ಲಿದೆ. ಈ ಮೂರು ರಾಜ್ಯಗಳ ಹೊರತಾಗಿ, ಬೇರೆ ಯಾವ ರಾಜ್ಯದಲ್ಲೂ 40,000 ಕ್ಕೂ ಅಧಿಕ ಸೋಂಕಿತರ ಪತ್ತೆಯಾಗಲಿಲ್ಲ.
ದೇಶದಲ್ಲಿ ( ದೆಹಲಿಯನ್ನು ಜಿಲ್ಲೆಯಾಗಿ ಪರಿಗಣಿಸದಿದ್ದರೆ ) ಮುಂಬೈ ನಗರವು ಅತೀ ಹೆಚ್ಚು ಸೋಂಕಿತರು (82,074) ಇರುವ ನಗರವಾಗಿದೆ. ಚೆನ್ನೈ (64,689) ಮತ್ತು ಥಾಣೆ ( 43,634) ನಂತರದ ಸ್ಥಾನದಲ್ಲಿದೆ. ದೇಶದ ಎಷ್ಟೋ ರಾಜ್ಯಗಳ ಸೋಂಕಿತರಿಗಿಂತ ಹೆಚ್ಚು ಸೋಂಕಿತರು ಈ 3 ಜಿಲ್ಲೆಗಳಲ್ಲಿದ್ದಾರೆ.

ಪ್ರಸ್ತುತ ದೇಶದಲ್ಲಿ 2,36,835 ಸಕ್ರಿಯ ಪ್ರಕರಣಗಳು ಇದ್ದು, 3,94,319 ಸೋಂಕಿತರು ಗುಣಮುಖರಾಗಿದ್ದಾರೆ. ಭಾರತದಲ್ಲಿ ಕೋವಿಡ್-19 ನಿಂದ ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು, ಸದ್ಯ ದೇಶದಲ್ಲಿ ಚೇತರಿಕೆ ಪ್ರಮಾಣವು ಶೇ.60.67 ಕ್ಕೆ ಏರಿದೆ ಮತ್ತು ಸಾವಿನ ಪ್ರಮಾಣವು ಶೇ. 2.87 ರಷ್ಟಿದೆ.

ವಿಶ್ವದಲ್ಲಿ ಭಾರತವು ಕೊರೋನಾ ಸೋಂಕಿನಿಂದ ಅತಿ ಹೆಚ್ಚು ಹಾನಿಗೊಳಗಾದ ನಾಲ್ಕನೇ ರಾಷ್ಟ್ರವಾಗಿದ್ದು, ಅಮೇರಿಕಾ (28.9 ಲಕ್ಷ), ಬ್ರೆಜಿಲ್ (15.4 ಲಕ್ಷ) ಮತ್ತು ರಷ್ಯಾ (6.67 ಲಕ್ಷ ) ಮಾತ್ರ ಭಾರತಕ್ಕಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದೆ. ಭಾರತದಲ್ಲಿ ಜನಸಂಖ್ಯೆಯೂ ಹೆಚ್ಚಿರುವುದರಿಂದ, ಪ್ರತಿ 10 ಲಕ್ಷಕ್ಕೆ ದೇಶದಲ್ಲಿ ಕೇವಲ 471ಸೋಂಕಿತರಿರುತ್ತಾರೆ. ಇದು ಎಷ್ಟೋ ರಾಷ್ಟ್ರಗಳಿಗಿಂತ ಉತ್ತಮ ಸ್ಥಾನದಲ್ಲಿದೆ.

ದೇಶದ ಕೊರೋನಾ ಸೋಂಕಿನ ಕುರಿತು ಮತ್ತಷ್ಟು ವಿಸ್ತೃತವಾದ ವಿವರಗಳು ಇಲ್ಲಿದೆ ನೋಡಿ ಮತ್ತು ಜಗತ್ತಿನ ಎಲ್ಲಾ ರಾಷ್ಟ್ರಗಳ ಅಂಕಿ ಅಂಶಗಳನ್ನು ಇಲ್ಲಿ ನೋಡಿ

LEAVE A REPLY

Please enter your comment!
Please enter your name here