ದೇಶಿ ಕ್ರಿಕೆಟಿಗರ ಸಂಭಾವನೆ ಏರಿಕೆಗೆ ಮುಂದಾದ ಬಿಸಿಸಿಐ!

0
131
Tap to know MORE!

ಹೊಸದಿಲ್ಲಿ: ಮುಂಬರುವ 2021/22ರ ಆವೃತ್ತಿಯ ರಣಜಿ ಟ್ರೋಫಿ, ವಿಜಯ್‌ ಹಝಾರೆ ಟ್ರೋಫಿ ಹಾಗೂ ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳಲ್ಲಿ ಆಡುವ ದೇಶಿ ಕ್ರಿಕೆಟಿಗರ ಪಂದ್ಯದ ಸಂಭಾವನೆಯನ್ನು ಏರಿಕೆ ಮಾಡುವಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬೆಡಿಕೆಯನ್ನು ಬಿಸಿಸಿಐ ಸ್ವೀಕರಿಸುವ ಬಹುತೇಕ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ದೇಶಿ ಕ್ರಿಕೆಟಿಗರ ಸಂಭಾವನೆಯನ್ನು ಏರಿಕೆ ಮಾಡುವ ಕುರಿತಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕಾರ್ಯದರ್ಶಿ ಜೇ ಶಾ ಹಾಗೂ ಖಜಾಂಚಿ ಅರುಣ್‌ ಧುಮುಲ್‌ ಅವರನ್ನೊಳಗೊಂಡ ಎರಡು ದಿನಗಳ ಸಭೆಯನ್ನು ಮುಂಬೈನಲ್ಲಿ ಆಯೋಜಿಸಲಾಗಿದೆ.

ಒಂದು ವೇಳೆ ಬಿಸಿಸಿಐ ಇದಕ್ಕೆ ಒಪ್ಪಿಗೆ ನೀಡಿದರೆ, 20 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳಾಡಿರುವ ಅನುಭವ ಹೊಂದಿರುವ ಕ್ರಿಕೆಟಿಗರಿಗೆ ದಿನಕ್ಕೆ 35,000 ರೂ. ಬದಲು 60,000 ರೂ. ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ. 20ಕ್ಕಿಂತ ಕಡಿಮೆ ಪಂದ್ಯಗಳ ಅನುಭವ ಹೊಂದಿರುವ ಕ್ರಿಕೆಟಿಗರು ದಿನಕ್ಕೆ 45,000 ರೂ.ಗಳನ್ನು ಪಡೆದುಕೊಳ್ಳಲಿದ್ದಾರೆ.

ನಿಮ್ಮ ಊರಿನ, ಸ್ಥಳೀಯ ಸುದ್ದಿಗಳನ್ನು ಸುದ್ದಿವಾಣಿಯಲ್ಲಿ ಪ್ರಕಟಿಸಲಾಗುವುದು. ಆದ ಜನ ಸ್ನೇಹಿ ಕಾರ್ಯಕ್ರಮಗಳ ವರದಿಯನ್ನು suddivani20@gmail.com ಗೆ mail ಮಾಡಿ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here