ದೇಶೀಯ ರಕ್ಷಣಾ ಉಪಕರಣಗಳ ರಫ್ತಿಗೆ ಯೋಜನೆ: ಆತ್ಮ ನಿರ್ಭರದತ್ತ ದೃಢ ಹೆಜ್ಜೆ

0
172
Tap to know MORE!

ನವದೆಹಲಿ: ಭಾರತದಲ್ಲಿ ತಯಾರಾಗುವ ರಕ್ಷಣಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರ ಗಳನ್ನು ರಫ್ತು ಮಾಡುವ ಕುರಿತು ಕೇಂದ್ರ ಸರ್ಕಾರ ನೀಲನಕ್ಷೆಯೊಂದನ್ನು ರೂಪಿಸಿದ್ದು , ಈ ಮೂಲಕ ಸ್ವಾವಲಂಬಿ ಭಾರತದತ್ತ ಹೆಜ್ಜೆ ಇಡುವ ಆಲೋಚನೆ ಹೊಂದಿದೆ.

ಇದಕ್ಕಾಗಿ ಕೊರೊನಾ ಸೋಂಕಿನ ಹಾವಳಿಯಿಂದ ಮುಕ್ತವಾಗುವವರೆಗೆ ಭಾರತದ ಸ್ನೇಹಪರ ರಾಷ್ಟ್ರಗಳೊಂದಿಗೆ, ದೇಶಿ ರಕ್ಷಣಾ ಉ‍ಪಕರಣ ಉದ್ಯಮದ ಪ್ರತಿನಿಧಿಗಳು ವೆಬ್ ಸಂವಾದದ ಮೂಲಕವೇ ವ್ಯವಹಾರ, ಮಾತುಕತೆ ನಡೆಸಲಿದ್ದಾರೆ. ಇದರಿಂದ ಬೇರೆ ದೇಶಗಳ ಅವಶ್ಯಕತೆ ಹಾಗೂ ಬೇಡಿಕೆಗಳನ್ನು ತಿಳಿದುಕೊಳ್ಳಲಿದ್ದಾರೆ.

ದೇಶೀಯ ರಕ್ಷಣಾ ಸಾಮಾಗ್ರಿ ಹಾಗೂ ಶಸ್ತ್ರಾಸ್ತ್ರಗಳ ರಪ್ತು ಮಾಡುವ ಈ ಯೋಜನೆಗೆ ರಾಜತಾಂತ್ರಿಕ ಮಾರ್ಗಗಳನ್ನೂ ಬಳಸಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ

ರಕ್ಷಣಾ ಉತ್ಪಾದನೆ ಇಲಾಖೆಯ ಕಾರ್ಯದರ್ಶಿ ರಾಜ್‌ ಕುಮಾರ್ ” ದೇಶೀಯವಾಗಿ ಉತ್ಪಾದಿಸಿರುವ ಶಸ್ತ್ರಾಸ್ತ್ರಗಳನ್ನು ಸ್ನೇಹಪರ ರಾಷ್ಟ್ರಗಳಿಗೆ ರಫ್ತು ಮಾಡಲು ಯೋಜನೆ ರೂಪಿಸಲಾಗಿದೆ ” ಎಂದು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here