ಮಂಗಳೂರು: ತುಳುನಾಡಿನ ಭವ್ಯ ಸಂಸ್ಕೃತಿಯ ಬಹುಮುಖ್ಯ ಆರಾಧನಾ ಪದ್ಧತಿಯೇ ದೈವರಾಧನೆ. ಆದರೆ, ಕೊರೊನಾ ಮಹಾಮಾರಿಯಿಂದಾಗಿ ಕಳೆದ ಏಳು ತಿಂಗಳಿನಿಂದ ತುಳುನಾಡಿನಲ್ಲಿ ನಡೆಯಬೇಕಿದ್ದ ಭೂತಾರಾಧನೆ, ದೈವರಾಧನೆಗೆ ವಿರಾಮ ಬಿದ್ದಿತ್ತು. ಇದೀಗ ಮತ್ತೆ ದೈವಗಳ ಪೂಜೆ, ಆರಾಧನೆ ಅರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಸುಕೀ ವನದ ಶ್ರೀ ಲಕ್ಷ್ಮಿ ನರಸಿಂಹ ಧರ್ಮಚಾವಡಿ ಕುದನೆ ದೇವಸ್ಥಾನದಲ್ಲಿ ಶ್ರೀ ರಕ್ತೇಶ್ವರಿ ಹಾಗೂ ಶ್ರೀ ಕಲ್ಲುರ್ಟಿ, ಶ್ರೀ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಿತು.
ತಮ್ಮ ಜೀವನದಲ್ಲಿ ಬರುವ ದುಃಖ, ಕಷ್ಟ ಮತ್ತು ದುಷ್ಟ ಶಕ್ತಿಗಳಿಂದ ಬರುವ ಸಮಸ್ಯೆಗಳಿಂದ ತಮ್ಮನ್ನು ರಕ್ಷಿಸುವಂತೆ ದೈವಗಳಲ್ಲಿ ಪ್ರಾರ್ಥಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ದೈವಾರಾಧನೆಯು ಇಲ್ಲಿನ ಕರಾವಳಿ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ.
ಕುದನೆ ಕ್ಷೇತ್ರದಲ್ಲಿ ನಡೆದ ದೈವಗಳ ನೇಮೋತ್ಸವನ್ನು ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಕಣ್ತುಂಬಿಕೊಂಡರು.