ದ್ವಿತೀಯ ಪಿಯುಸಿ : ಟಾಪ್ 10 ರಲ್ಲಿ ಆಳ್ವಾಸ್ ಕಾಲೇಜಿನ 21 ವಿದ್ಯಾರ್ಥಿಗಳು!

0
188
Tap to know MORE!

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಶೇ.99.06 ಫಲಿತಾಂಶ ದಾಖಲಿಸಿದೆ. ರಾಜ್ಯದ ಟಾಪ್ 10 ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಸಾಲಿನಲ್ಲಿ, ಆಳ್ವಾಸ್ ಕಾಲೇಜಿನ 21 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವರ್ಷ 2,779 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, 2,753 ಮಂದಿ ಉತ್ತೀರ್ಣರಾಗಿದ್ದಾರೆ, ವಿಜ್ಞಾನ ವಿಭಾಗದಲ್ಲಿ 2,229 ವಿದ್ಯಾರ್ಥಿಗಳು ಹಾಜರಾಗಿ 2,209 ಮಂದಿ ಉತ್ತೀರ್ಣರಾಗಿದ್ದು, ಶೇ.99.10 ಪಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 502 ವಿದ್ಯಾರ್ಥಿಗಳು ಪರೀಕ್ಷೆ ಬರೆದು, 496 ಮಂದಿ ಉತ್ತೀರ್ಣರಾಗಿ ಶೇ. 98.80 ಫಲಿತಾಂಶ ಲಭಿಸಿದೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ ಎಂದು ಹೇಳಿದರು.

ಟಾಪ್ 10ನಲ್ಲಿ 21 ವಿದ್ಯಾರ್ಥಿಗಳು:

ಪಿಯುಸಿಯ ಮೂರೂ ವಿಭಾಗದ ಒಟ್ಟು 21 ಮಂದಿ ವಿದ್ಯಾರ್ಥಿಗಳು ರಾಜ್ಯದ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗ
1. ಅನರ್ಘ್ಯ ಕೆ.(592)
   ರಘುವೀರ್ ಮಠದ(592)
   ಲಿಶನ್ ಎಎ(592)
2. ಅನಿಲ್ ಬಣ್ಣಿ ಶೆಟ್ಟಿ (589)
3. ಭಗೇಶ್ ಎನ್. ಕೊಡಗನೂರು(588)
   ವಿನಾಯಕ ಜಿ.ಗಡ್ಡಿ (588)
   ಸುವೀಕ್ಷ್ ವಿ. ಹೆಗ್ಡೆ (588)
   ಮಹೇಶ್ವರಿ ಹೆಚ್.ಸಿ ( 588)
4. ಸ್ವಾತಿ ಬಿ ಮಳೆಮಠ್ (587)
   ಪಿ.ಎಸ್.ರವೀಂದ್ರ (587)
   ಧನ್ಯ ಕೆ.ಎನ್( 587)

ವಾಣಿಜ್ಯ ವಿಭಾಗ
1. ಹರ್ಷ ಜೆ.ಆಚಾರ್ಯ (593)
2. ಈಶ್ವರ್ ವಿಜಯಸ್ವಾಮಿ ಎಲಗಾರ್ (591)
ಶ್ರೇಯಾ ಕೆ.ಬಿ (591)
3. ಪ್ರತೀತಾ (590)
ರಿಹಾಲ್ ಅಯ್ಯಪ್ಪ ಎಂ.ಎಸ್. (590)
4. ಶ್ರೀಸಮರ್ಥ(589)
ಭಾರ್ಗವಿ ಬಿ (589)

ಚಂದನ ಡಿ ಹೆಗ್ಡೆ (589)
ಪ್ರಿಯಾಂಕಾ ಜಿ. ಧನ್ಯ (589)
ಐಶ್ವರ್ಯ ಎಂ.( 589)

ವಿಷಯವಾರು, ಒಟ್ಟು 747 ಪೇಪರ್‌ಗಳಲ್ಲಿ ಶೇ.ನೂರು ಫಲಿತಾಂಶ ದಾಖಲಾಗಿದೆ. ಈ ಪೈಕಿ ಗಣಿತ ವಿಷಯದಲ್ಲಿ ಅತಿ ಹೆಚ್ಚು ಅಂದರೆ 298 ವಿದ್ಯಾರ್ಥಿಗಳು ನೂರರಲ್ಲಿ ನೂರು ಅಂಕಗಳನ್ನು ದಾಖಲಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ಪಿ.ಆರ್.ಒ ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here