ದ್ವಿತೀಯ ಪಿಯುಸಿ: ಡಿಸ್ಟಿಂಕ್ಷನ್ ನಲ್ಲಿ ಪಾಸ್ ; ಆದರೂ ಆತ್ಮಹತ್ಯೆ!

0
191
Tap to know MORE!

ತುಮಕೂರು: ಕ್ಯಾತಸಂದ್ರ ಬಳಿಯ ಬಸವಪಟ್ಟಣದ ವಿದ್ಯಾರ್ಥಿಯೋರ್ವ, ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣನಾಗಿದ್ದರೂ, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ತಮಕೂರಿನ ಚೇತನ್ ( 18) ದ್ವಿತೀಯ ಪಿಯುಸಿಯಲ್ಲಿ ಶೇ 89 ಅಂಕ ಪಡೆದರೂ, ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪಡೆದಂತಹ ಅಂಕ ಕಡಿಮೆ ಆಯಿತು ಎಂದು ನೊಂದುಕೊಂಡು, ಆತ ನೇಣಿಗೆ ಕೊರಳೊಡ್ಡಿದ್ದಾನೆ.

ನಗರದ ವಿದ್ಯಾ ಕಾಲೇಜಿನಲ್ಲಿ ಓದುತಿದ್ದ ಚೇತನ್, ಫಲಿತಾಂಶ ಬಂದಾಗಿನಿಂದ ಬಹಳ ನೊಂದುಕೊಂಡಿದ್ದ. ಇನ್ನೂ ಹೆಚ್ಚು ಅಂಕ ಬರುವ ನಿರೀಕ್ಷೆ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ. ಆದ್ರೆ ನಿರೀಕ್ಷೆಗೆ ತಕ್ಕಂತೆ ಅಂಕ ಬಂದಿಲ್ಲವೆಂದು ನಿನ್ನೆ ಸಂಜೆ (ಮಂಗಳವಾರ) ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣುಹಾಕಿಕೊಂಡಿದ್ದಾನೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here