ಜ.1 ರಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭ | ಮಾರ್ಗಸೂಚಿ ಪ್ರಕಟಿಸಿದ ಪಿಯು ಶಿಕ್ಷಣ ಇಲಾಖೆ

0
41

ಬೆಂಗಳೂರು(ಡಿ.25): ಸರ್ಕಾರ ನಿಗದಿಪಡಿಸಿರುವಂತೆ, ಜ.1ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗಲಿದೆ. ಆದರೆ ತರಗತಿ ಹಾಜರಾತಿ ಕಡ್ಡಾಯವಿಲ್ಲ. ವಿದ್ಯಾರ್ಥಿಗಳ ಹಾಜರಾತಿಗೆ ಪೋಷಕರಿಂದ ಲಿಖಿತ ಒಪ್ಪಿಗೆ ಕಡ್ಡಾಯ. ತರಗತಿಗಳನ್ನು ಪುನರಾರಂಭಿಸಲು, ಹಲವು ಅಂಶಗಳಿರುವ ಮಾರ್ಗಸೂಚಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

ಜ.1ರಿಂದ ಶಾಲೆ, ಪಿಯು ಕಾಲೇಜುಗಳನ್ನು ಆರಂಭಿಸುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬುಧವಾರ ಮುಖ್ಯಮಂತ್ರಿ ಸ್ಪಷ್ಟಪಡಿಸಿದ ಬಳಿಕ ಶಿಕ್ಷಣ ಇಲಾಖೆಯು 10 ನೇ ತರಗತಿ ವಿದ್ಯಾರ್ಥಿಗಳ ತರಗತಿ ಬೋಧನೆ ಮತ್ತು 6 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಆರಂಭಕ್ಕೆ ವೇಳಾಪಟ್ಟಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಪಿಯು ಇಲಾಖೆ ಕೂಡ ಮಾರ್ಗಸೂಚಿ ಹಾಗೂ ವೇಳಾಪಟ್ಟಿ ಪ್ರಕಟಿಸಿದೆ.

ಇದನ್ನೂ ಓದಿ: 2021ರ ಮಾರ್ಚ್ ತಿಂಗಳಲ್ಲಿ ನಡೆಯುವುದಿಲ್ಲ SSLC, PUC ಪರೀಕ್ಷೆಗಳು!

ಕಾರ್ಯವಿಧಾನ :

  • ದ್ವಿತೀಯ ಪಿಯು ತರಗತಿಗಳಿಗೆ ಪ್ರತಿದಿನ ತಲಾ 45 ನಿಮಿಷಗಳ ನಾಲ್ಕು ತರಗತಿಗಳನ್ನು ನಡೆಸಬೇಕು.
  • ವಿದ್ಯಾರ್ಥಿಗಳಿಗೆ ತರಗತಿ ಹಾಜರಾತಿ ಕಡ್ಡಾಯಗೊಳಿಸಬಾರದು – ತರಗತಿಗೆ ಹಾಜರಾಗಲಿಚ್ಛಿಸದ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ನೀಡಬೇಕು.
  • ವಿದ್ಯಾರ್ಥಿಗಳ ಹಾಜರಾತಿಗೆ ಪೋಷಕರ ಪೋಷಕರಿಂದ ಲಿಖಿತ ಒಪ್ಪಿಗೆ ಕಡ್ಡಾಯ.
  • ಪ್ರತಿ ತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಬಹುದು – ಕೊಠಡಿ ವಿಸ್ತೀರ್ಣಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿಪಡಿಸಬೇಕು.
  • ಪ್ರತಿ ವಿದ್ಯಾರ್ಥಿ, ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಬರಬೇಕು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಉಪನಿರ್ದೇಶಕರು ಮತ್ತು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕಾಲೇಜು ಆರಂಭಕ್ಕೆ ಮುನ್ನ ಅನುಸರಿಸಬೇಕಾದ ಕ್ರಮಗಳು

  • ಕಾಲೇಜುಗಳನ್ನು ಸ್ವಚ್ಛಗೊಳಿಸಿ ಸಂಪೂರ್ಣ ಸ್ಯಾನಿಟೈಸ್‌ ಮಾಡಬೇಕು
  • ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್‌ ಬದಲು ಬೇರೆ ವ್ಯವಸ್ಥೆ ಮಾಡಬೇಕು
  • ಶಾಲಾವರಣದಲ್ಲಿ ಮುಕ್ತ ಗಾಳಿ-ಬೆಳಕು ಬರುವಂತಿರಬೇಕು.
  • ಸಾಮೂಹಿಕ ಪ್ರಾರ್ಥನೆ, ಕ್ರೀಡೆ ಮತ್ತಿತರ ಗುಂಪು ಚಟುವಟಿಕೆಗಳನ್ನು ನಿಷೇಧಿಸಬೇಕು
  • ಕಾಲೇಜು ಆವರಣದಲ್ಲಿ ಆರೋಗ್ಯ ಕೇಂದ್ರಗಳ ಸಹಾಯವಾಣಿ ಸಂಖ್ಯೆ ಪ್ರಕಟಿಸಬೇಕು
  • ಕಾಲೇಜು ಆವರಣದಲ್ಲಿ ಈಜುಕೊಳಗಳಿದ್ದರೆ ಮುಚ್ಚಬೇಕು
  • ನೀರಿನ ಸಂಪು, ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ಕ್ಲೋರಿನ್‌ ಆಧಾರಿತ ಪೌಡರ್‌ನಿಂದ ತೊಳೆಯಬೇಕು
  • ಡಿಜಿಟಲ್‌ ಥರ್ಮೋಮೀಟರ್‌, ಕೈ ತೊಳೆಯಲು ಸೋಪು, ಸ್ಯಾನಿಸೈಸರ್‌ ವ್ಯವಸ್ಥೆ ಕಡ್ಡಾಯ

ಕಾಲೇಜು ಆರಂಭದ ಬಳಿಕ ಅನುಸರಿಸಬೇಕಾದ ಕ್ರಮಗಳು

  • ಪ್ರತಿ ವಿದ್ಯಾರ್ಥಿ, ಶಿಕ್ಷಕರು, ಸಿಬ್ಬಂದಿಗಳು ದೈಹಿಕ ಅಂತರ ಕಾಯ್ದುಕೊಳ್ಳಬೇಕು
  • ಹಾಜರಾಗುವ ಮಕ್ಕಳಿಂದ ಕಡ್ಡಾಯವಾಗಿ ಪೋಷಕರ ಲಿಖಿತ ಪತ್ರ ಪಡೆಯಬೇಕು
  • ಕಾಲೇಜು ಬಸ್ಸುಗಳನ್ನೂ ನಿತ್ಯ ಸ್ಯಾನಿಟೈಸ್‌ ಮಾಡಬೇಕು
  • ನಿತ್ಯ ಪ್ರತಿ ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಪರಿಶೀಲಿಸಬೇಕು
  • ಕೋವಿಡ್‌ ಲಕ್ಷಣಗಳಿರುವ ಮಕ್ಕಳನ್ನು ಮನೆಗೆ ಕಳಿಸಿ ಚಿಕಿತ್ಸೆಗೆ ಕ್ರಮ ವಹಿಸಬೇಕು
  • ಶಿಕ್ಷಕರು, ಸಿಬ್ಬಂದಿಗಳಲ್ಲಿ ಯಾರಿಗಾದರೂ ಕೋವಿಡ್‌ ಲಕ್ಷಣಗಳಿದ್ದರೆ ರಜೆ ನೀಡಬೇಕು
  • ಅನಾರೋಗ್ಯ ಪೀಡಿತರಿಗಾಗಿ ಪ್ರತ್ಯೇಕ ಕೊಠಡಿ ಗುರುತಿಸಬೇಕು
  • ಸಂದರ್ಶಕರ ಪ್ರವೇಶ ಸಂಪೂರ್ಣ ನಿಷೇಧಿಸಬೇಕು

ಜ.1 ರಿಂದಲೇ ಶಾಲಾರಂಭ ! ತರಗತಿ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ!

LEAVE A REPLY

Please enter your comment!
Please enter your name here