ದ್ವಿತೀಯ ಪಿಯುಸಿ : ಯೂಟ್ಯೂಬ್ ಲೈವ್ ಮೂಲಕ ತರಗತಿ – ವೇಳಾಪಟ್ಟಿ ಪ್ರಕಟ

0
202
Tap to know MORE!

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು, ರಾಜ್ಯದ ಪಿಯು ಶಿಕ್ಷಣ ಇಲಾಖೆಯು ನಾಳೆಯಿಂದ (ಜುಲೈ 23) ಯೂಟ್ಯೂಬ್‌ನಲ್ಲಿ ಲೈವ್ ವಿಡಿಯೋ ತರಗತಿಗಳನ್ನು ಪ್ರಾರಂಭಿಸಲಿದೆ.  ಪ್ರತಿದಿನ, 45 ನಿಮಿಷಗಳ ಒಂದು ಅವಧಿಯಂತೆ ಒಟ್ಟು ನಾಲ್ಕು ಅವಧಿಗಳನ್ನು ನಡೆಸಲಾಗುತ್ತದೆ.

ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಸಲಾಗುವ ಪಾಠಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ಚಾನಲ್ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವಂತೆ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಸೂಚಿಸಲಾಗಿದೆ.  ಕಾಲೇಜುಗಳು ಪ್ರಾರಂಭವಾದ ಬಳಿಕ ಈ ತರಗತಿಗಳನ್ನು ಮತ್ತೆ ಉಪನ್ಯಾಸಕರು ಕಲಿಸುತ್ತಾರೆ ಎಂಬ ಕಾರಣಕ್ಕೆ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಇಂಟರ್ನೆಟ್ ಸೌಲಭ್ಯ ಇತ್ಯಾದಿ ಇಲ್ಲದ ವಿದ್ಯಾರ್ಥಿಗಳು ಚಿಂತಿಸಬೇಕಾಗಿಲ್ಲ ಎಂದು ಪಿಯು ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಕಣಗವಲ್ಲಿ ಹೇಳಿದರು.

ಪ್ರತಿ ದಿನ 45 ನಿಮಿಷಗಳ 4 ತರಗತಿಗಳನ್ನು ನಡೆಸಬೇಕು. ಪ್ರತಿ ವಿಷಯಕ್ಕೆ ಎರಡು ಅವಧಿಗಳು, ಒಂದು ಅವಧಿಯ ವಿಡಿಯೋ ತರಗತಿ ಮತ್ತು ನಂತರದ ತರಗತಿಗಳಲ್ಲಿ ವಿಡಿಯೋ ತರಗತಿಗೆ ಸಂಬಂಧಿಸಿದ ಸಂದೇಹಗಳ ನಿವಾರಣೆ, ನೋಟ್ಸ್‌ ತಯಾರಿ, ಬರವಣಿಗೆ ಕೆಲಸಗಳನ್ನು ಮಾಡಬೇಕು.

ಇಲಾಖೆಯು ಈಗಾಗಲೆ ತರಗತಿಗಳಿಗೆ ಸಮಯ ಸಾರಿಣಿಯನ್ನು ಪ್ರಕಟಿಸಿದೆ.  ಅವಧಿಗಳು ಈ ಕೆಳಗಿನಂತೆ ಇರುತ್ತದೆ‌.

 • ಬೆಳಿಗ್ಗೆ 9 ರಿಂದ ಬೆಳಿಗ್ಗೆ 9.45 ರವರೆಗೆ ಮೊದಲ ಅವಧಿ
 • ಬೆಳಿಗ್ಗೆ 9.45 ರಿಂದ 10.30 ರವರೆಗೆ ಎರಡನೇ ಅವಧಿ
 • ಬೆಳಿಗ್ಗೆ 10.30 ರಿಂದ 11.15 ರವರೆಗೆ ಮೂರನೇ ಅವಧಿ
 • ಬೆಳಿಗ್ಗೆ 11.15 ರಿಂದ ಮಧ್ಯಾಹ್ನ 12 ರವರೆಗೆ ಕೊನೆಯ ಅವಧಿ

ವೇಳಾಪಟ್ಟಿ

 • ಜು.23: ಭೌತಶಾಸ್ತ್ರ/ಅಕೌಂಟೆನ್ಸಿ ಭೌತಶಾಸ್ತ್ರ/ಅಕೌಂಟೆನ್ಸಿ (ನೋಟ್ಸ್‌) ರಸಾಯನಶಾಸ್ತ್ರ /ರಾಜ್ಯಶಾಸ್ತ್ರ ರಸಾಯನಶಾಸ್ತ್ರ /ರಾಜ್ಯಶಾಸ್ತ್ರ (ನೋಟ್ಸ್‌)
 • ಜು.24: ಜೀವಶಾಸ್ತ್ರ/ಬಿಸಿನೆಸ್‌ ಸ್ಟಡೀಸ್‌ ಜೀವಶಾಸ್ತ್ರ/ ಬಿಸಿನೆಸ್‌ ಸ್ಟಡೀಸ್‌ (ನೋಟ್ಸ್‌) ಗಣಿತ/ಅರ್ಥಶಾಸ್ತ್ರ ಗಣಿತ/ಅರ್ಥಶಾಸ್ತ್ರ (ನೋಟ್ಸ್‌)
 • ಜು.25: ಗಣಿತ/ಇತಿಹಾಸ ಗಣಿತ/ಇತಿಹಾಸ (ನೋಟ್ಸ್‌) ಜೀವಶಾಸ್ತ್ರ/ ಬಿಸಿನೆಟ್‌ ಸ್ಟಡೀಸ್‌ (ನೋಟ್ಸ್‌)
 • ಜು.27: ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್‌ ಕಂಪ್ಯೂಟರ್‌ ಸೈನ್ಸ್‌/ ಸಮಾಜಶಾಸ್ತ್ರ (ನೋಟ್ಸ್‌)
 • ಜು.28: ಬೇಸಿಕ್‌ ಮ್ಯಾಥ್‌್ಸ/ ಸಮಾಜಶಾಸ್ತ್ರ ನೋಟ್ಸ್‌ ಭೌತಶಾಸ್ತ್ರ/ಅಕೌಂಟೆನ್ಸಿ (ನೋಟ್ಸ್‌)
 • ಜು.29: ಇಂಗ್ಲಿಷ್‌ ನೋಟ್ಸ್‌ ಕನ್ನಡ/ಹಿಂದಿ/ಸಂಸ್ಕೃತ (ನೋಟ್ಸ್‌)
 • ಜು.30: ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್‌ ರಸಾಯನಶಾಸ್ತ್ರ/ರಾಜ್ಯಶಾಸ್ತ್ರ (ನೋಟ್ಸ್‌)
 • ಜು.31: ಜೀವಶಾಸ್ತ್ರ/ಬಿಸಿನೆಸ್‌ ಸ್ಟಡೀಸ್‌ ನೋಟ್ಸ್‌ ಗಣಿತ/ಅರ್ಥಶಾಸ್ತ್ರ (ನೋಟ್ಸ್‌)
 • ಆ.1: ಗಣಿತ/ಇತಿಹಾಸ ನೋಟ್ಸ್‌ ಜೀವಶಾಸ್ತ್ರ/ ಬಿಸಿನೆಸ್ ಸ್ಟಡೀಸ್‌ (ನೋಟ್ಸ್)

ಪ್ರತಿ ಕಾಲೇಜಿನ ಸಂಯೋಜಕರು ವಿದ್ಯಾರ್ಥಿಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿ ವಿಡಿಯೋಗಳನ್ನು ತಲುಪಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕವೂ ಸಂಪರ್ಕಿಸಿ ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸಬೇಕು. ನಿಗದಿತ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳಿಗೆ ತಪ್ಪದೇ ತಲುಪಿಸಬೇಕು.

ಜಿಲ್ಲಾ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಐದು ಅಥವಾ ಹತ್ತು ಉಪನ್ಯಾಸಕರು ಅಥವಾ ಸಂಪನ್ಮೂಲ ವ್ಯಕ್ತಿಗಳ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ಇದನ್ನು ಪ್ರಾಂಶುಪಾಲರು ನಿರ್ವಹಿಸಬೇಕು.

LEAVE A REPLY

Please enter your comment!
Please enter your name here