ದ್ವಿತೀಯ ಪಿಯು ರಿಸಲ್ಟ್; ರಾಜ್ಯದಲ್ಲೇ ದಾಖಲೆಯ ಫಲಿತಾಂಶ ಪಡೆದ ಆಳ್ವಾಸ್

0
732
Tap to know MORE!

ಮೂಡುಬಿದಿರೆ : ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆಯುವ ಮೂಲಕ ಆಳ್ವಾಸ್ ಪದವಿ ಪೂರ್ವ ಕಾಲೇಜು ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ. 600ಕ್ಕೆ 600 ಅಂಕ ಗಳಿಸಿದ ದ.ಕ ಜಿಲ್ಲೆಯ 445 ವಿದ್ಯಾರ್ಥಿಗಳಲ್ಲಿ 190 ವಿದ್ಯಾರ್ಥಿಗಳು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು. ಇವರಲ್ಲಿ 13 ವಿದ್ಯಾರ್ಥಿಗಳು ಆಳ್ವಾಸ್ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳೆಂಬುದು ಗಮನಾರ್ಹ

ಪರೀಕ್ಷೆಗೆ ಹಾಜರಾದ 2510 ವಿದ್ಯಾರ್ಥಿಗಳಲ್ಲಿ 1637 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ 19 ವಿಷಯವಾರು ಫಲಿತಾಂಶದಲ್ಲಿ ಒಟ್ಟು 3016 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಗಣಿತ ಹಾಗೂ ಇಂಗ್ಲೀಷ್ ನಲ್ಲಿ ಕ್ರಮವಾಗಿ 542 ಮತ್ತು 514 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ಬಯೋಲಜಿ, ಬೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ, ಅಕೌಂಟೆನ್ಸಿಯಲ್ಲಿ ಕ್ರಮವಾಗಿ 403, 401, 308 ಹಾಗೂ 46 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

40 ವಿದ್ಯಾರ್ಥಿಗಳು 599 ಅಂಕಗಳು, 36 ವಿದ್ಯಾರ್ಥಿಗಳು 598, 28 ವಿದ್ಯಾರ್ಥಿಗಳು 597, 35 ವಿದ್ಯಾರ್ಥಿಗಳು 596 ಅಂಕಗಳು, 29 ವಿದ್ಯಾರ್ಥಿಗಳು 595, 29 ವಿದ್ಯಾರ್ಥಿಗಳು 594, 25 ವಿದ್ಯಾರ್ಥಿಗಳು 593, 30 ವಿದ್ಯಾರ್ಥಿಗಳು 592, 23 ವಿದ್ಯಾರ್ಥಿಗಳು 591 ಹಾಗೂ 20 ವಿದ್ಯಾರ್ಥಿಗಳು 590 ಅಂಕಗಳನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ್ ನಾಯಕ್, ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಚಂದ್ರಶೇಖರ್ ರಾಜೇ ಅರಸ್, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥೆ ಝಾನ್ಸಿ ಪಿ ಎನ್., ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ, ಸಂಯೋಜಕಿ ವಿದ್ಯಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here