ಹಗೆ ದ್ವೇಷ ಮರೆತು ಪ್ರೀತಿ ಸಹಬಾಳ್ವೆಯಿಂದ ಬಾಳಿರಿ

0
146
Tap to know MORE!

ನಸುಕಿನ ಜಾವ 4.00ರ ಸುಮಾರಿಗೆ ರಮ್ಯಾಗೆ ಯಾವುದೇ ಎಲಾರಂ ಶಭ್ದವಿಲ್ಲದ್ದೆ ಎಚ್ಚರವಾಗುವುದು ವಾಡಿಕೆ. ತನ್ನ ಮೊಬೈಲ್ ನ್ನೂ ಕೈಗೆತ್ತಿಕೊಂಡಾಗ ಪ್ರತಿಯೊಂದು ಗ್ರೂಪ್ ಗೆ ಶುಭೋದಯ ಹಾಕದಿದ್ದರೆ ಆಕೆಗೆ ಅದೇನೋ ಅಸಮಾಧಾನ. ಅಂದು ಶುಭೋದಯ ಹಾಕುತ್ತಿರಬೇಕಾದರೆ ಅಲ್ಲಿ ಒಂದು ಮರಣದ ವಾರ್ತೆ ಇರುವುದು ಆಕೆಯ ಕಣ್ಣಿಗೆ ಬಿತ್ತು. ಅಲ್ಲಿಗೆ ಓಂ ಶಾಂತಿ ಹಾಕಿ ತನ್ನ ದಿನನಿತ್ಯದ ಚಟುವಟಿಕೆಗಳತ್ತ ಗಮನ ಹರಿಸಿದಳು.

ಧ್ಯಾನ, ಪ್ರಾಣಾಯಾಮ, ಪ್ರಾರ್ಥನೆ ಬಳಿಕ ದೇವರಿಗೆ ದೀಪ ಹಚ್ಚಿ, ಹೂವಿಟ್ಟು ಅಡುಗೆ ಕೋಣೆಯತ್ರ ಹೆಜ್ಜೆ ಹಾಕಿದಳು. ಬಿಸಿಬಿಸಿ ಪೂರಿಬಾಜಿ ತಯಾರು ಮಾಡಿ, ಆದಷ್ಟು ಬೇಗ ತನ್ನ ಕೆಲ್ಸವನ್ನೆಲ್ಲ ಪೂರೈಸಿ ಮಧ್ಯಾಹ್ನದ ಅಡುಗೆಯನ್ನು ತಯಾರಿಸಿ ತಾನು ಮರಣದ ಮನೆಯತ್ತ ಪ್ರಯಾಣ ಬೆಳೆಸಿದಳು. ಹೋಗುತ್ತಿರುವ ದಾರಿಯಲ್ಲಿ ರಾಘವೇಂದ್ರ ಮಠವೊಂದು ಇರಲು, ಅಲ್ಲಿಗೆ ಪ್ರವೇಶಿಸಿ, ದೇವರಿಗೆ ಕೈ ಮುಗಿದು, ತೀರ್ಥ ಪ್ರಸಾದ ಸ್ವೀಕರಿಸಿ, ಅಲ್ಲೇ ನೆಲದಲ್ಲೇ ಕುಳಿತು ತನ್ನ ಮನಸಲ್ಲೇ ಆಲೋಚಿಸತೊಡಗಿದಳು… ತಾನೀಗ ಹೋಗುತ್ತಿರುವುದು ಮರಣದ ಮನೆಯತ್ತ, ದೇವಸ್ಥಾನ ಪ್ರವೇಶಿಸಿದೆ, ಇದು ಸರಿಯಾ? ತಪ್ಪಾ? ಒಂದು ಬಾರಿ ಚಿಂತೆಗೀಡು ಮಾಡಿತು ಮನಸ್ಸು. ತನ್ನಲ್ಲೇ ತಾನು ಸಮಾಧಾನಪಡಿಸಿ ತಪಿಲ್ಲ ,ಮರಣದ ಮನೆಗೆ ಹೋಗಿ ಬಂದು ದೇವಸ್ಥಾನ ಪ್ರವೇಶ ತಪ್ಪಾಗಿರಬಹುದು. ಅಲ್ಲಿಗೆ ಹೋಗುವುದಕ್ಕೆ ಮೊದಲೇ ದೇವಸ್ಥಾನ ಪ್ರವೇಶ ತಪ್ಪಿರಲಾರದು ಎಂದು ಅಲಿಂದ ಎದ್ದು ಹೆಜ್ಜೆ ಹಾಕಲು ಪ್ರಾರಂಭಿಸಿದಳು.

ಲೇಖಕರಿಂದ ಇನ್ನೊಂದಿಷ್ಟು : ಕೊರೋನಾ ನಂತರದ ದಿನಗಳು ಹೇಗಿರಬಹುದು?

ಹೋಗುತ್ತಿರುವ ದಾರಿಯಲ್ಲಿ ತನ್ನ ಗೆಳತಿಯರು ಅಲ್ಲಿಗೆ ಹೋಗುವುದನ್ನು ಅರಿತು ತನ್ನ ವಾಹನದಲ್ಲೇ ಅವರನ್ನು ಕರೆದೊಯ್ದಳು. ಗೆಳತಿ ಕಾವ್ಯಗೆ ಕೇಳಿದಳು… ಇವತ್ತು ಡ್ಯೂಟಿಗೆ ಹೋಗಲಿಲ್ಲವೇ? ರಜೆ ಹಾಕಿರುವೆಯಾ ಕೇಳಿದಾಗ ಆಕೆ, ಇಲ್ವೇ ಡಾಕ್ಟರ್ ಬಳಿ ಪರ್ಮಿಷನ್ ತೆಗೆದು ಬಂದಿರುವೆ ಎಂದು ಹೇಳುತ್ತಿರುವಾಗ್ಲೆ ಮರಣದ ಮನೆಯು ತಲುಪಿತು. ಅಂಗಳದಲೊಂದಷ್ಟು ಜನ ಸೇರಿದ್ದರು,ಎಲ್ಲರೂ ಅಲ್ಲಲ್ಲೇ ಗುಂಪು ಗುಂಪಾಗಿ ಪಿಸು ದನಿಯಲ್ಲಿ ಮಾತಾಡುತ್ತಿದ್ದರು. ಒಂದೆಡೆ ಒಂದು ಹೆಣ್ಣಿನ ಕೂಗು ಜೋರಾಗಿ ಕೇಳಿಸುತ್ತಿತ್ತು ಅಯ್ಯೋ ದೇವರೇ ನನ್ನ ಅಜ್ಜಿ ಹೊರಟು ಹೋದ್ರಲ್ಲ ಅಜ್ಜಿ… ಅಜ್ಜಿ… ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ನಾವು ನಮ್ಮ ಕೈಯಲ್ಲಿರುವ ಹೂವು, ಊದ್ದುಕಡ್ಡಿ, ಮುಂತಾದುವುಗಳನ್ನು ಅಲ್ಲಿರುವ ಒಂದು ಗಂಡಸಿನ ಕೈಗೆ ಕೊಟ್ಟೆವು. ಅಂತೆಯೇ ಶವಕ್ಕೆ ಸ್ನಾನ ಮಾಡಿಸುತ್ತಿರಬೇಕಾದರೆ ರಮ್ಯಾಳ ಮನಸ್ಸು ಆಲೋಚನೆಯ ಸುಳಿಗೆ ಸಿಲುಕಿ, ಮನುಷ್ಯ ಜೀವನ ಇಷ್ಟೇ, ಇರುವಾಗ ಹಗೆ, ಪ್ರತಿಷ್ಠೆ, ದ್ವೇಷ, ಅಸೂಯೆ, ನಿಂದನೆ, ನಾನು… ನನ್ನದು ಸತ್ತ ಮೇಲೆ ಎಷ್ಟು ಒಳ್ಳೆಯವರು ಎಂದು ಹೊಗಳಲು ಶುರು ಮಾಡುತ್ತವೆ.

ಅಷ್ಟರಲ್ಲೇ ಅಲ್ಲೇ ಮೂಲೆಯಲ್ಲಿ ಒಂದು ಕುರ್ಚಿಯಲ್ಲಿ ಕುಳಿತು, ಪ್ರಾಯದ ವ್ಯಕ್ತಿಯೋರ್ವರು ಜೋರಾದ ದ್ವನಿಯಲ್ಲಿ ಯಾವುದೋ ಒಂದು ಸೊಸೆ ಹೇಳ್ತಾ ಇದ್ಲು…. ಅತ್ತೆ ನಮ್ಮ ಮನೆಗೆ ಬಂದ್ರೆ ನಾನು ಸಾಯ್ತೇನೆ ಎಂದು… ಇನ್ನು ಮುಂದೆ ಎಲ್ಲಾ ಸೊಸೆಯಂದಿರು ನೆಮ್ಮದಿಯಾಗಿ ಇರಬಹುದು. ಅತ್ತೆ ಹೊರಟು ಹೋದಳಲ್ಲ. ಯಾವ ಸೊಸೆ ಆತ್ಮಹತ್ಯೆ ಮಾಡಿಕೊಳ್ಳೋದು ಬೇಡ. ಅಲ್ವಾ ? ಎಂದು ಏನೇನೋ… ಕೆಲವು ವಿಷಯ ಹೇಳುತ್ತಿರುವಾಗ.. ಕಾವ್ಯಗೆ ರಮ್ಯಾಳ ಜೀವನ ಒಂದು ಬಾರಿ ನೆನಪಾಯಿತು.

ದಾರಿಯಲ್ಲಿ ಹಿಂತಿರುಗಿ ಬರಬೇಕಾದರೆ ಕಾವ್ಯ ಹೇಳಿದಳು ಅಲ್ಲ ರಮ್ಯ ನಿನಗೂ, ಅಲ್ಲಿರುವ ಸೊಸೆಯಂದಿರು ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ. ನೀನು, ನಿನ್ನ ಅತ್ತೆ ಮಾವನವರಿಗೆ ಸೇವೆಗೈದ ರೀತಿಗೂ ಇಲ್ಲಿನ ಸನ್ನಿವೇಶಕ್ಕೂ ತುಂಬಾ ವ್ಯತ್ಯಾಸ … ನಿನ್ನ ಮಾವ ಜೀವನ್ ಮರಣದ ಪರಿಸ್ಥಿತಿಯಲ್ಲೂ ಅವರ ಸೇವೆಗೈದು ಅವರಿಗೆ ಪುನರ್ಜನ್ಮ ಭಾಗ್ಯ ನೀಡಿರುವೆ.. ಮಾವ,ಕುಟುಂಬಸ್ಥರು, ಮಹಿಳೆಯರು, ಸ್ನೇಹಿತೆಯರು ಸೇರಿದಂತೆ ಎಲ್ಲರಿಂದ ಶಹಬಾಸ್ ಗಿರಿ ಗಿಟ್ಟಿಸಿಕೊಂಡು, ಮಾವನ ಆಶೀರ್ವಾದವೂ ಪಡೆದೆ. ಆದರಿಲ್ಲಿ ….ಎಂದಾಗ …. ರಮ್ಯ ಇದು ಅವರವರ ಕರ್ಮದ ಫಲ, .. ಏನು ಆಗಬೇಕೋ, ಅದು ಆಗೇ ಆಗುತ್ತದೆ.. . ಇಲ್ಲಿ ಯಾರನ್ನೂ ದೂರಲು ಸಾಧ್ಯವಿಲ್ಲ. ಅವರವರ ಕರ್ಮಾನುಸಾರ ಪ್ರತಿಯೊಂದು ಘಟನೆಗಳು ಸಂಭವಿಸುತ್ತದೆ. ಆತನ ಇಚ್ಛೆ ಹೇಗಿದೆಯೋ ಹಾಗೆ ಆಗುತ್ತದೆ. ವಿಧಿಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಎಂದಾಗ… ರಮ್ಯಳ ಗೆಳತಿ ಕಾವ್ಯ ಆಕೆಯ ಜೀವನದ ಕಹಿ ನೆನಪುಗಳು ಒಂದು ಬಾರಿ ಕಾವ್ಯಳ ಕಣ್ಣ ಮುಂದೆ ಹಾದು ಹೋಗಿ… ಆಕೆಯ ಕಣ್ಣಂಚಿನಲ್ಲಿ ನೀರೂರಿದವು. ಇತ್ತ ರಮ್ಯ ತನ್ನ ಗೆಳತಿಗೆ ನೋವಾಯಿತೇನೋ ಎಂಬ ಗೊಂದಲದಲ್ಲಿ ಸಿಲುಕಿದಳು.

ಈ ಜಗತ್ತು ದೇವರ ಕಾಣಿಕೆ. ಯಾರನ್ನೂ ದ್ವೇಷಿಸದೆ, ದೂಷಿಸದೆ, ತಮ್ಮ ತಪ್ಪುಗಳನ್ನು ತಾವೇ ಸರಿಪಡಿಸಿಕೊಂಡು, ತಿದ್ದಿಕೊಳ್ಳುತ್ತ ಮುನ್ನಡೆಯ ಬೇಕು. ಇಲ್ಲಿ ಯಾರೂ ಶ್ರೇಷ್ಟರು ಅಲ್ಲ. ಭಗವಂತನೊಬ್ಬನೆ ಶ್ರೇಷ್ಠ ಮತ್ತು ಶಾಶ್ವತ. ದ್ವೇಷಾಸುಯೆಗಳನ್ನು ಕಟ್ಟಿಕೊಂಡು ಬರೀ ಹಗೆ ಸಾಧಿಸುತ್ತಾ ಹೋಗಬೇಡಿ. ಕಲ್ಮಶಯಕ್ತ ಮನಸ್ಸಿನಲ್ಲಿ ಸುಖ ಸಂತೋಷವನ್ನು ಕಾಣಲು ಅಸಾಧ್ಯ. ಪರಸ್ಪರ ಪ್ರೀತಿ ಸಹಬಾಳ್ವೆ ಸೌಹಾರ್ದತೆಯಿಂದ ಬಾಳಬೇಕುಂಬುದೇ ಇದರ ತಾತ್ಪರ್ಯ.

ಕಥೆ ಬರಹ : ಶ್ರೀಮತಿ ರೇಖಾ ಸುದೇಶ್ ರಾವ್ ಸುರತ್ಕಲ್

LEAVE A REPLY

Please enter your comment!
Please enter your name here