ದ.ಕದಲ್ಲಿ ಲಾಕ್ ಡೌನ್ ಇಲ್ಲ: ಸಿಂಧೂ ರೂಪೇಶ್

0
177
Tap to know MORE!

ಮಂಗಳೂರು: ಹಲವು ದಿನಗಳಿಂದ ದ. ಕ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಈ ಕುರಿತಂತೆ ಲಾಕ್ ಡೌನ್ ಆಗುವ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇಂದು ಜಿಲ್ಲಾಧಿಕಾರಿಣಿ ಸಿಂಧೂ ರೂಪೇಶ್, ಈ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.

“10ನೇ ತರಗತಿ ಪರೀಕ್ಷೆಗಳು ಮುಗಿದ ಬಳಿಕವೂ, ಯಾವುದೇ ಲಾಕ್ ಡೌನ್ ಇರುವುದಿಲ್ಲ. ಆದರೆ ರಾಜ್ಯ ಸರಕಾರದ ಆದೇಶದಂತೆ ಜುಲೈ 5ರಿಂದ ಪ್ರತಿ ಅದಿತ್ಯವಾರದಂದು 4 ವಾರಗಳ ಕಾಲ ಸಂಪೂರ್ಣ ಬಂದ್ ಇರುವುದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ದಯವಿಟ್ಟು ಸಮಾಜದಲ್ಲಿ ಅವ್ಯವಸ್ಥೆ ಉಂಟುಮಾಡುವ ನಕಲಿ ಸುದ್ದಿಗಳನ್ನು ಹರಡಬೇಡಿ. ಲಾಕ್‌ಡೌನ್ ಆದೇಶಗಳು ರಾಜ್ಯ ಸರ್ಕಾರದಿಂದ ಬರುತ್ತವೆ” ಎಂದರು

LEAVE A REPLY

Please enter your comment!
Please enter your name here