ದ.ಕ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ| ರಾಜೇಂದ್ರ ಕೆ.ವಿ

0
146
Tap to know MORE!

ಡಾ. ಕೆ ವಿ ರಾಜೇಂದ್ರ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಹೊಸ ಜಿಲ್ಲಾಧಿಕಾರಿಯಾಗಿ (ಡಿಸಿ) ಅಧಿಕಾರ ವಹಿಸಿಕೊಂಡರು. ಇವರು ದ.ಕ ಜಿಲ್ಲೆಯ 130 ನೇ ಡಿಸಿ.

ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಎಂ ಜೆ ರೂಪಾ ಹೊಸ ಜಿಲ್ಲಾಧಿಕಾರಿಯವರನ್ನು ಸ್ವಾಗತಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಜಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರಿಂದ ಅಧಿಕಾರ ಸ್ವೀಕರಿಸಿದ ಡಾ| ರಾಜೇಂದ್ರ ಕೆ.ವಿ

ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, “ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಜಿಲ್ಲೆಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಮೊದಲು ಕೆಲಸ ಮಾಡಿದ ಬೆಳಗಾವಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಎರಡೂ ಗಡಿ ಜಿಲ್ಲೆಗಳು. ಎರಡೂ ಜಿಲ್ಲೆಗಳಲ್ಲಿ, ಇತರ ರಾಜ್ಯಗಳಿಂದ ಬಂದ ಜನರೇ ಹೆಚ್ಚು. ಆದ್ದರಿಂದ ಇನ್ನೂ ಹೆಚ್ಚಿನ ಕೊರೋನವೈರಸ್ ಪ್ರಕರಣಗಳನ್ನು ನಿರೀಕ್ಷಿಸಬಹುದು. ಇದು ಎಲ್ಲಾ ಅಧಿಕಾರಿಗಳು ಮತ್ತು ನಿರ್ವಾಹಕರಿಗೆ ಸವಾಲಾಗಿದೆ” ಎಂದರು.

“ನಾನು ಜಿಲ್ಲೆಯಲ್ಲಿ ನಡೆಯುತ್ತಿರುವ ಒಳ್ಳೆಯ ಕಾರ್ಯಗಳನ್ನು ಮುಂದುವರಿಸುತ್ತೇನೆ. ಸುಧಾರಣೆ ಅಗತ್ಯವಿದ್ದಲ್ಲಿ, ಅದಕ್ಕಾಗಿ ನಾನು ಯೋಜನೆಗಳನ್ನು ರೂಪಿಸುತ್ತೇನೆ. ನಾನು ಈ ಹಿಂದೆಯೂ ಒಮ್ಮೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೆಲಸ ಮಾಡಿದ್ದೇನೆ. ನಾನು ಪ್ರಸ್ತುತ ಪರಿಸ್ಥಿತಿಯನ್ನು ನೋಡಿ, ಅಗತ್ಯವಿದ್ದರೆ ಸುಧಾರಣೆಗಳನ್ನು ತರುತ್ತೇನೆ, ”ಎಂದು ಅವರು ಹೇಳಿದರು

LEAVE A REPLY

Please enter your comment!
Please enter your name here