ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ದಾಖಲೆಯ 183 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ. 24 ಘಂಟೆಗಳ ಲೆಕ್ಕಾಚಾರದಲ್ಲಿ ಇದು ಜಿಲ್ಲೆಯ ಮಟ್ಟಿಗೆ ದಾಖಲೆಯಾಗಿದೆ. ಇದು ಕೇವಲ ಎರಡನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ.
ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಒಟ್ಟು 22,181 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಅದರಲ್ಲಿ 1,542 ಜನರ ವರದಿಗಳು ಪಾಸಿಟಿವ್ ಎಂದು ಬಂದಿದೆ., ಇದರಲ್ಲಿ ಇತರ ಜಿಲ್ಲೆಗಳ 10 ವ್ಯಕ್ತಿಗಳು ಸೇರಿದ್ದಾರೆ. ಈ ಪೈಕಿ 819 ಪ್ರಕರಣಗಳು ಸಕ್ರಿಯವಾಗಿವೆ. ಇದರ ಮಧ್ಯೆ ಇಂದು 12 ಮಂದಿ ಸೇರಿದಂತೆ ಒಟ್ಟು 695 ಜನರು ಚೇತರಿಸಿ ಬಿಡುಗಡೆಯಾಗಿದ್ದಾರೆ ಮತ್ತು ಇದುವರೆಗೆ ಜಿಲ್ಲೆಯಲ್ಲಿ 29 ಸೋಂಕಿತರು ಸಾವನ್ನಪ್ಪಿದ್ದಾರೆ.
ಇಂದಿನ ವರದಿಯಲ್ಲಿ, 64 ಸೋಂಕಿತರು ಇತರರ ಸಂಪರ್ಕದೊಂದಿಗೆ ಕೊರೋನಾ ಸೋಂಕನ್ನು ತಗುಲಿಸಿಕೊಂಡಿದ್ದಾರೆ. ಅದಲ್ಲದೆ ಇಂದಿನ 54 ಸೋಂಕಿತರ ಸಂಪರ್ಕದ ಮೂಲವೇ ತಿಳಿಯದೇ ಇರುವುದು ಜನತೆಗೆ ಮತ್ತಷ್ಟು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.