ದ.ಕ ಜಿಲ್ಲೆಯಲ್ಲಿ ಒಂದೇ ದಿನ 8 ಸೋಂಕಿತರು ಸಾವು!

0
199
Tap to know MORE!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಮೂರನೇ ದಿನ 100ಕ್ಕೂ ಅಧಿಕ ಸೋಂಕಿತರ ವರದಿಯಾಗಿದ್ದು, ಇಂದು 139 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ. ಒಟ್ಟಾರೆಯಾಗಿ, ಜಿಲ್ಲೆಯಲ್ಲಿ ಇದು ಕೇವಲ ನಾಲ್ಕನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ಕ್ಕೂ ಅಧಿಕ ಸೋಂಕಿತರ ವರದಿಯಾಗಿದೆ.

ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಇದುವರೆಗೆ ಒಟ್ಟು 22,585 ಮಾದರಿಗಳನ್ನು ವರದಿಗಳು ಬಂದಿದೆ. ಅದರಲ್ಲಿ 1,848 ಜನರ ವರದಿಗಳು ಪಾಸಿಟಿವ್ ಎಂದು ಬಂದಿದೆ. ಈ ಪೈಕಿ 1,057 ಪ್ರಕರಣಗಳು ಸಕ್ರಿಯವಾಗಿವೆ. ಇದರ ಮಧ್ಯೆ ಇಂದು 51 ಮಂದಿ ಸೇರಿದಂತೆ ಒಟ್ಟು 753 ಜನರು ಚೇತರಿಸಿ ಬಿಡುಗಡೆಯಾಗಿದ್ದಾರೆ.

ಇಂದಿನ ವರದಿಯಲ್ಲಿ, 64 ಸೋಂಕಿತರು ಇತರರ ಸಂಪರ್ಕದೊಂದಿಗೆ ಕೊರೋನಾ ಸೋಂಕನ್ನು ತಗುಲಿಸಿಕೊಂಡಿದ್ದಾರೆ. ಅದಲ್ಲದೆ ಇಂದಿನ 54 ಸೋಂಕಿತರ ಸಂಪರ್ಕದ ಮೂಲವೇ ತಿಳಿಯದೇ ಇರುವುದು ಜನತೆಗೆ ಮತ್ತಷ್ಟು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.

ಅದಲ್ಲದೆ ಇಂದಿನ ಜಿಲ್ಲಾ ಬುಲೆಟಿನ್ ಪ್ರಕಾರ 24 ಗಂಟೆಗಳಲ್ಲಿ ಜಿಲ್ಲೆಯ 8 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 37ಗೆ ಏರಿದೆ. ಸಾವಿನ ಕಾರಣವನ್ನು ತಿಳಿಯಲು ಈಗಾಗಲೇ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಮೊದಲ ಸಾವು!

ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಯ ಭದ್ರತಾ ಪಡೆಯವರಲ್ಲಿ ಸೋಂಕು ವೇಗನೆ ಹರಡುತ್ತಿದ್ದು, ಇಂದು ಮೊದಲ ಸಾವು ಸಂಭವಿಸಿದೆ. ಎಂಆರ್ಪಿಎಲ್ ಒಂದು ಕೇಂದ್ರ ಸಂಸ್ಥೆಯಾಗಿದ್ದು, ಲಾಕ್ಡೌನ್ ಅವಧಿಯಲ್ಲೂ ನೌಕರರು ಶಿಫ್ಟ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅಲ್ಲಿ ನ ಭದ್ರತಾ ಸಿಬ್ಬಂದಿಯವರಲ್ಲಿ ಕೊರೋನಾ ಸೋಂಕು ಹರಡುತ್ತಿರುವುದು, ಸಂಸ್ಥೆಯ ಇತರ ಅಧಿಕಾರಿ ಮತ್ತು ಸಿಬ್ಬಂದಿಯಲ್ಲಿ ಆತಂಕ ಹೆಚ್ಚಿಸಿದೆ.

LEAVE A REPLY

Please enter your comment!
Please enter your name here