ದ.ಕ ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದ್ದವರ ಸಂಖ್ಯೆ 31ಕ್ಕೆ ಏರಿಕೆ!

0
169
Tap to know MORE!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿದಿದೆ. ಜುಲೈ 9 ರ ಗುರುವಾರ ರಾತ್ರಿ ಮತ್ತು ಶುಕ್ರವಾರದ ಒಳಗಿನ 24 ಗಂಟೆಗಳೊಳಗೆ, ಜಿಲ್ಲೆಯಲ್ಲಿ 3 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

35, 48 ಮತ್ತು 62 ವರ್ಷ ವಯಸ್ಸಿನ ಮೂವರು ಮರಣ ಹೊಂದಿರುತ್ತಾರೆ. 35 ವರ್ಷದ ವ್ಯಕ್ತಿ ಹೊಸಬೆಟ್ಟುವಿನ ನಿವಾಸಿಯಾಗಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ (ವೆನ್ಲಾಕ್) ಕೊನೆಯುಸಿರೆಳೆದರು. 48 ವರ್ಷದ ವ್ಯಕ್ತಿ ಮಂಗಳೂರಿನ ನಿವಾಸಿಯಾಗಿದ್ದು, ನ್ಯುಮೋನಿಯಾದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರೂ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಿಧನರಾದರು ಮತ್ತು 62 ವರ್ಷದ ವ್ಯಕ್ತಿಯಲ್ಲಿ SARI ರೋಗಲಕ್ಷಣಗಳಿದ್ದವು. ಇವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಜಿಲ್ಲೆಯಲ್ಲಿ ಈ ವಾರ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಗುರುವಾರದ ಜಿಲ್ಲಾ ಬುಲೆಟಿನ್ ಪ್ರಕಾರ, ದಕ್ಷಿಣ ಕನ್ನಡದ 1,709 ಜನರಲ್ಲಿ ಕರೋನಾ ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲಿ 977 ಸಕ್ರಿಯ ಪ್ರಕರಣಗಳಾಗಿವೆ ಮತ್ತು 702 ಜನರು ಚೇತರಿಸಿಕೊಂಡು ಮತ್ತುಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here