ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ತನ್ನ ರುದ್ರ ನರ್ತನವನ್ನು ಮುಂದುವರೆಸಿದೆ. ಸೋಂಕಿತರ ಸಂಖ್ಯೆಯಲ್ಲಿ ಮಾತ್ರವಲ್ಲದೇ, ಪ್ರತಿದಿನ ಕನಿಷ್ಟ ಒಬ್ಬರನ್ನು ಬಲಿ ಪಡೆಯುತ್ತಿದೆ. ಮಹಾಮಾರಿ ಕೊರೋನಾ ಸೋಂಕಿನಿಂದ ಜಿಲ್ಲೆಯಲ್ಲಿ ಇಂದು ಇಬ್ಬರು ಮೃಪಟ್ಟಿದ್ದಾರೆ.
ಹಳೆಯಂಗಡಿ ಇಂದಿರಾನಗರ ನಿವಾಸಿ 42 ವರ್ಷದ ಪುರುಷ ಹಾಗೂ ಬಿಸಿರೋಡ್ ನ ಪುರುಷರೊಬ್ಬರು ಕೋವಿಡ್- 19ಗೆ ಮೃತಪಟ್ಟಿದ್ದಾರೆ. ಹಳೆಯಂಗಡಿ ಇಂದಿರಾನಗರ ನಿವಾಸಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇನ್ನೊಬ್ಬರ ವರದಿ ಇನ್ನಷ್ಟೇ ತಿಳಿಯಬೇಕಾಗಿದೆ.
ಜಿಲ್ಲೆಯಲ್ಲಿ ನಿನ್ನೆ 4 ಮಂದಿ ಬಲಿ!
ಜುಲೈ 12 ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನವೈರಸ್ ಸೋಂಕಿನಿಂದ ನಾಲ್ಕು ಸಾವುಗಳು ವರದಿಯಾಗಿತ್ತು.
ಮೃತರು ಪುತ್ತೂರಿನ 50 ವರ್ಷದ ವ್ಯಕ್ತಿ, ಮಂಗಳೂರು ನಗರದ ಉರ್ವಾ ಸ್ಟೋರ್ ಪ್ರದೇಶದ 72 ವರ್ಷದ ವ್ಯಕ್ತಿ, ಬಳ್ಳಾಲ್ ಬಾಗ್ ಮೂಲದ 60 ವರ್ಷದ ಮಹಿಳೆ ಮತ್ತು ಬಂದರ್ ನ 68 ವರ್ಷದ ಮಹಿಳೆ. ಪುತ್ತೂರು ನಿವಾಸಿ ಹೊರತುಪಡಿಸಿ ಬೇರೆಯವರೆಲ್ಲರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.