ದ.ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ

0
161
Tap to know MORE!

ಮಂಗಳೂರು : ದ.ಕ ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ರೂಪೇಶ್ ಅವರ ದಿಢೀರ್ ವರ್ಗಾವಣೆಯ ಬಳಿಕ ನೂತನ ಜಿಲ್ಲಾಧಿಕಾರಿಯಾಗಿ ಆಯ್ಕೆಯಾಗಿರುವ ಡಾ. ರಾಜೇಂದ್ರ ಕೆ.ವಿ. ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು.

ಇವರು ಹಾವೇರಿಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಬಳಿಕ ದಾವಣಗೆರೆಯ ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ ತಮ್ಮ ವೈದ್ಯಕೀಯ ಶಿಕ್ಷಣ ಪಡೆದರು.

ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಇವರು, ಐಎಎಸ್ ಪರೀಕ್ಷೆ ಬರೆದು ದೇಶಕ್ಕೆ 32 ನೇ ರ್ಯಾಂಕ್ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದರು. ಅವರು 2013 ಕರ್ನಾಟಕ ಕೆಡೆರ್ ನ ಐಎಎಸ್ ಅಧಿಕಾರಿಯಾಗಿದ್ದಾರೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಸಹಾಯಕ ಕಾರ್ಯದರ್ಶಿಯಾಗಿ ತಮ್ಮ ಮೊದಲ ಹುದ್ದೆಯನ್ನು ನಿರ್ವಹಿಸಿದ್ದರು. ಬಳಿಕ ದೆಹಲಿಯಲ್ಲಿ ಭಾರತೀಯ ರೈಲ್ವೆಯ ವೈದ್ಯಕೀಯ ಸೇವೆಯಲ್ಲಿ ಸೇವೆಯಲ್ಲಿದ್ದರು.

ತದನಂತರ 2016ರಲ್ಲಿ ಪುತ್ತೂರಿನ ಸಹಾಯಕ ಆಯುಕ್ತ ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡ ಡಾ. ರಾಜೇಂದ್ರ ಕೆ.ವಿ ಅವರು ಅತ್ಯಂತ ಜನಸ್ನೇಹಿ ವ್ಯಕ್ತಿಯೆಂದು ಪುತ್ತೂರಿನಲ್ಲಿ ಹೆಸರನ್ನು ಗಳಿಸಿದ್ದರು.

ಬಳಿಕ ಬೆಳಗಾವಿಯ ಜಿಲ್ಲಾ ಪಂಚಾಯತ್ ಸಿಇಓ ಆಗಿ ಹಲವಾರು ಸಮಾಜ ಕಾರ್ಯಗಳನ್ನು ಮಾಡಿದ ಇವರು, ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಜಿಲ್ಲೆಯ ಸದ್ಯದ ಪರಿಸ್ಥಿತಿಗೆ ಡಾ. ರಾಜೆಂದ್ರ ಕೆ.ವಿ ಅವರು ಡಿಸಿಯಾಗಿ ಆಯ್ಕೆ ಆಗಿರುವುದು ಸೂಕ್ತವಾಗಿದೆ ಎಂದು ರಾಜಕೀಯ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here